ಆತ್ಮವಿಶ್ವಾಸ, ಛಲ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಇಲ್ಲೊಬ್ಬ ಯುವಕ ನಿದರ್ಶನವಾಗಿದ್ದಾರೆ. ಷೇರುಪೇಟೆಯಲ್ಲಿ ಇಂತಹವರ ನಿದರ್ಶನದ ಕತೆ ಹಲವುಂಟು. ರಾಕೇಶ್ ಜುಂಜುನವಾಲ, ವಿಜಯ್ ಕೇದಿಯಾ, ಸಿಂಘಾನಿಯಾ ಹೀಗೆ ಹಲವು ಜನರು ಷೇರುಗಳ ಮೇಲಿನ ಹೂಡಿಕೆಗಳಿಂದಲೇ (Share Investments) ಸಾವಿರಾರು ಕೋಟಿ, ಲಕ್ಷಾಂತರ ಕೋಟಿ ರೂ ಒಡೆಯರಾಗಿದ್ದುಂಟು. ಈ ಸಾಲಿನಲ್ಲಿ ಹೈದರಾಬಾದ್ನ 24 ವರ್ಷ ಸಂಕರ್ಷ್ ಚಂದ ಬಂದು ನಿಂತಿದ್ದಾರೆ. ಸಂಕರ್ಷ್ ಚಂದ (Sankarsh Chanda) ಅವರು 23ರ ವಯಸ್ಸಿಗೆ 100 ಕೋಟಿ ರೂಗೂ ಹೆಚ್ಚು ಮೊತ್ತದ ಷೇರುಸಂಪತ್ತು ಹೊಂದಿ ಗಮನ ಸೆಳೆದಿದ್ದಾರೆ.

ಹೈದರಾಬಾದ್ ಮೂಲದ ಸಂಕರ್ಷ್ ಚಂದ್ ನವದೆಹಲಿ ಬಳಿಯ ನೋಯ್ಡಾದ ಬೆನೆಟ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಟೆಕ್ ಎಂಜಿನಿಯರಿಂಗ್ ಓದುತ್ತಿದ್ದ. ಆಗ ಕೇವಲ 17 ವರ್ಷ. 2 ಸಾವಿರ ರೂ. ಹಣವನ್ನು ಷೇರು ಮಾರುಕಟ್ಟೆಯಲ್ಲಿ ಮೊದಲಿಗೆ ಹೂಡಿಕೆ ಮಾಡಿದ್ದರು. ಅದಾಗಲೇ ಅವರಿಗೆ ಷೇರುಹೂಡಿಕೆ ಒಂದು ಕನಸಿನ ಉದ್ಯೋಗವಾಗಿತ್ತು. ನಂತರ ಇಂಜನೀಯರಿಂಗ್ ಓದಿಗೆ ವಿರಾಮ ಕೊಟ್ಟು ಷೇರು ಹೂಡಿಕೆಯತ್ತಲೇ ಗಮನ ಕೊಡಲು ಅರಂಭಿಸಿದರು. ಅವರ ಹೂಡಿಕೆ ಮತ್ತೊವನ್ನು 2 ಸಾವಿರ ರೂ.ದಿಂದ 1.5 ಲಕ್ಷಕ್ಕೆ ಏರಿಸಿದ್ದರು. ಎರಡು ವರ್ಷದಲ್ಲಿ ಇವರು ಹೂಡಿಕೆ ಮಾಡಿದ್ದ ಷೇರುಗಳು ಅದ್ಭುತವಾಗಿ ಬೆಳೆದು 13ಲಕ್ಷ ರೂ ಬೆಲೆ ಪಡೆದವು. ಸಂಕರ್ಷ್ ಚಂದ್ ಅವರ ಷೇರುಹೂಡಿಕೆ ಪ್ರಯಾಣ ಸುದೀರ್ಘ ಹಾದಿ ಸವೆಸುತ್ತಾ ಹೋಗುತ್ತಿದೆ. ಹೂಡಿಕೆಗಳ ವಿಸ್ತಾರ ಕೂಡ ಹೆಚ್ಚಾಗಿದೆ.

ಸಂಕರ್ಷ್ ಚಂದ್ ಷೇರುಪೇಟೆಯಲ್ಲಿ ಮಾತ್ರವೇ ಹೂಡಿಕೆ ಮಾಡಿ ಹಣ ಗಳಿಸುತ್ತಿಲ್ಲ. ಬ್ಯುಸಿನೆಸ್ ಮ್ಯಾನ್ ಕೂಡ ಹೌದು. ಸ್ವಬೋಧ ಇನ್ಫಿನಿಟಿ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಎಂಬ ಹೂಡಿಕೆ ಸಲಹಾ ಸಂಸ್ಥೆ ಹುಟ್ಟು ಹಾಕಿರುವ ಮೊದಲ ವರ್ಷದಲ್ಲಿಯೇ 12 ಲಕ್ಷ ರೂ. ಗಳಿಸಿದ್ದಾರೆ. ಸದ್ಯ ಅದು ನಾಲ್ಕನೇ ವರ್ಷಕ್ಕೆ 40 ಲಕ್ಷ ರೂ. ಗಳಿಸಿದೆ. ಸಂಕರ್ಷ್ ಚಂದ್ ಕೇವಲ ಹೂಡಿಕೆ ಮತ್ತು ವ್ಯವಹಾರಕ್ಕೆ ಸೀಮಿತರಾದವರಲ್ಲ. 2016ರಲ್ಲೇ ಪುಸ್ತಕವೊಂದನ್ನು ಬರೆದ ಅಸಾಮಾನ್ಯ ಪ್ರತಿಭೆ ಎಂದು ಗುರುತಿಸಿಕೊಂಡಿದ್ದಾರೆ