Kornersite

Just In Sports

IPL 2023: ಹ್ಯಾಟ್ರಿಕ್ ಸಿಕ್ಸ್ ಬಾರಿಸಿ, ಗೆಲುವಿನ ದಡ ಸೇರಿದ ಮುಂಬಯಿ!

Mumbai : ಕೊನೆಯ ಓವರ್ ನಲ್ಲಿ ಟಿಮ್‌ ಡೇವಿಡ್‌ (Tim David ) ಹ್ಯಾಟ್ರಿಕ್‌ ಸಿಕ್ಸ್‌ ಸಿಡಿಸಿದ ಪರಿಣಾಮ ರಾಜಸ್ಥಾನ ರಾಯಲ್ಸ್‌ (Rajasthan Royals ) ವಿರುದ್ಧ ಮುಂಬಯಿ ಇಂಡಿಯನ್ಸ್‌ (Mumbai Indians) 6 ವಿಕೆಟ್‌ ಗಳ ಭರ್ಜರಿ ಜಯ ಸಾಧಿಸಿದೆ.

ಗೆಲ್ಲಲು 213 ರನ್‌ ಗಳ ಕಠಿಣ ಗುರಿ ಬೆನ್ನಟ್ಟಿದ ಮುಂಬಯಿ ಇಂಡಿಯನ್ಸ್ ತಂಡವು 19.3 ಓವರ್‌ ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 214 ರನ್‌ ಗಳಿಸಿ ಗೆಲುವ ಸಾಧಿಸಿತು. ಮುಂಬಯಿ ತಂಡಕ್ಕೆ ಕೊನೆಯ 24 ಎಸೆತಗಳಲ್ಲಿ 57 ರನ್‌ ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಭರ್ಜರಿ ಹೋರಾಟ ನಡೆಸಿದ ಮುಂಬಯಿ, 17 ನೇ ಓವರ್‌ನಲ್ಲಿ 14 ರನ್‌, 18ನೇ ಓವರ್‌ನಲ್ಲಿ 11 ರನ್‌, 19ನೇ ಓವರ್‌ನಲ್ಲಿ 15 ರನ್‌ ಗಳಿಸಿತು. ಕೊನೆಯ 6 ಎಸೆತಗಳಲ್ಲಿ 17 ರನ್‌ ಬೇಕಿತ್ತು. ಕೊನೆಯ ಓವರ್ ನಲ್ಲಿ ಜೇಸನ್‌ ಹೋಲ್ಡರ್‌ ಎಸೆದ ಮೊದಲ ಮೂರೂ ಎಸೆತಗಳನ್ನು ಟಿಮ್‌ ಡೇವಿಡ್‌ ಸಿಕ್ಸರ್‌ ಗೆ ಅಟ್ಟಿ ಜಯ ತಂದುಕೊಟ್ಟರು.

ಟಿಮ್‌ ಡೇವಿಡ್‌ ಮತ್ತು ತಿಲಕ್‌ ವರ್ಮಾ ಮುರಿಯದ 5ನೇ ವಿಕೆಟ್ ಗೆ 23 ಎಸೆತಗಳಲ್ಲಿ 62 ರನ್‌ ಜೊತೆಯಾಟವಾಡಿದ ಪರಿಣಾಮ ಮುಂಬಯಿ ತಂಡವು ಜಯದ ನಗೆ ಬೀರಿದರು. ಟಿಮ್‌ ಡೇವಿಡ್‌ ಔಟಾಗದೇ 45 ರನ್‌(14 ಎಸೆತ, 2 ಬೌಂಡರಿ, 5 ಸಿಕ್ಸ್‌), ತಿಲಕ್‌ ವರ್ಮಾ ಔಟಾಗದೇ 29 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸರ್‌) ಗಳಿಸಿದರು.

ರೋಹಿತ್‌ ಶರ್ಮಾ ಕೇವಲ 3 ರನ್‌ಗಳಿಸಿ ಔಟಾದರೂ ಮಧ್ಯಮ ಇಶನ್‌ ಕಿಶನ್‌ ಮತ್ತು ಕ್ಯಾಮರೂನ್‌ ಗ್ರೀನ್‌ ಎರಡನೇ ವಿಕೆಟ್ ಗೆ 38 ಎಸೆತಗಳಲ್ಲಿ 62 ರನ್‌ ಗಳಿಸಿ ಚೇತರಿಕೆ ನೀಡಿದರು. ನಾಲ್ಕನೇಯ ವಿಕೆಟ್ ಗೆ ಸೂರ್ಯಕುಮಾರ್‌ ಯಾದವ್‌ ಮತ್ತು ತಿಲಕ್‌ ವರ್ಮಾ 31 ಎಸೆತಗಳಲ್ಲಿ 51 ರನ್‌ ಜೊತೆಯಾಟವಾಡಿದರು.

ಇಶನ್‌ ಕಿಶನ್‌ 28 ರನ್‌(23 ಎಸೆತ, 4 ಬೌಂಡರಿ), ಕ್ಯಾಮರೂನ್‌ ಗ್ರೀನ್‌ 44 ರನ್‌(26 ಎಸೆತ, 4 ಬೌಂಡರಿ, 2 ಸಿಕ್ಸರ್)‌, ಸೂರ್ಯಕುಮಾರ್‌ ಯಾದವ್‌ 55 ರನ್‌( 29 ಎಸೆತ, 8 ಬೌಂಡರಿ, 2 ಸಿಕ್ಸರ್) ಗಳಿಸಿದರು. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ ಗೆ 72 ರನ್‌ ಗಳಿಸಿತು. ಜೋಸ್‌ ಬಟ್ಲರ್‌ 18 ರನ್‌ ಗಳಿಸಿ ಔಟಾದರು. ಒಂದು ಕಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ಯಶಸ್ವಿ ಜೈಸ್ವಾಲ್ ಇನ್ನೊಂದೆಡೆ ಭರ್ಜರಿ ಪ್ರದರ್ಶನ ತೋರಿಸಿ, ಶತಕ ಸಿಡಿಸಿದರು.

ಜೈಸ್ವಾಲ್‌ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ನಂತರ 53 ಎಸೆತಗಳಲ್ಲಿ ಶತಕ ಬಾರಿಸಿದರು. ಅಂತಿಮವಾಗಿ 62 ಎಸೆತಗಳಲ್ಲಿ 124 ರನ್‌ (16 ಬೌಂಡರಿ, 8 ಸಿಕ್ಸರ್‌) ಗಳಿಸಿದರು. 124 ರನ್‌ ಹೊಡೆಯುವ ಮೂಲಕ ಈ ಐಪಿಎಲ್‌ನ ಗರಿಷ್ಠ ವೈಯಕ್ತಿಕ ಸ್ಕೋರ್‌ ಜೊತೆಗೆ ಒಟ್ಟು 428 ರನ್‌ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಧರಿಸಿದರು. ಸಂಜು ಸ್ಯಾಮ್ಸನ್‌ 14 ರನ್‌, ಜೇಸನ್‌ ಹೋಲ್ಡರ್‌ 11 ರನ್‌ ಗಳಿಸಿ ಔಟಾದರು. ಇತರ ರೂಪದಲ್ಲೇ 25 ರನ್( ಬೈ1, ಲೆಗ್‌ಬೈ 7, ನೋಬಾಲ್‌ 1, ವೈಡ್‌ 16) ಬಂದಿದ್ದರಿಂದ ರಾಜಸ್ಥಾನ 7 ವಿಕೆಟ್‌ ನಷ್ಟಕ್ಕೆ 212 ರನ್‌ ಗಳಿಸಿದರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್