Koppal : ನನ್ನ ಸೋಲಿಸಲು ಇದು ಗುಜರಾತ್ ಅಲ್ಲ. ಇದು ಕರ್ನಾಟಕ ಎಂದು ಅಮಿತ್ ಶಾ ಹೇಳಿಕೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ (Jagadeesh Shettar) ತೀರುಗೇಟು ನೀಡಿದ್ದಾರೆ.
ಜಿಲ್ಲೆಯಲ್ಲಿ (Koppala) ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸವದಿ 50 ಸಾವಿರ ಮತಗಳ ಅಂತರದಿಂದ ಸೋಲುತ್ತಾರೆ ಎಂಬ ಅಮಿತ್ ಶಾ (Amitshah) ಹೇಳಿಕೆಗೆ ತೀರುಗೇಟು ನೀಡಿದ ಅವರು, ನಾನು ಹುಬ್ಬಳ್ಳಿ ಜನರ ಹೃದಯದಲ್ಲಿದ್ದೇನೆ. ಹುಬ್ಬಳ್ಳಿ (Hubballi) ಜನ ಏನು ಅಂತ ನನಗೆ ಗೊತ್ತಿದೆ. ನನ್ನ ಬಗ್ಗೆ ಕೂಡ ಅವರಿಗೆ ಗೊತ್ತಿದೆ. ನಾನು ಗೆದ್ದು ಬಂದೇ ಬರುತ್ತೇನೆ ಎಂದು ವಿಸ್ವಾಸ ವ್ಯಕ್ತಪಡಿಸಿದರು.
ನನ್ನನ್ನು ಕಾಂಗ್ರೆಸ್ ಸೇರ್ಪಡೆಯಾಗುವಂತೆ ಮಾಡಿದ್ದೇ ಬಿಜೆಪಿ. ರಾಜ್ಯದ ಕೆಲವೇ ಕೆಲವು ಜನರ ಕಪಿಮುಷ್ಠಿಯಲ್ಲಿ ಬಿಜೆಪಿ ಇದೆ. ನನಗೆ ಎಲ್ಲವನ್ನೂ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ನಮ್ಮ ಕುಟುಂಬ ಬಿಜೆಪಿಗೆ ಏನು ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ (BJP) ಕಟ್ಟಲು ನನ್ನ ಶ್ರಮ ಕೂಡ ಇದೆ. ನನಗೆ ಒಬ್ಬ ಶಾಸಕರ ರೀತಿಯಲ್ಲಿ ಪತ್ರ ಬರೆಯಲು ಹೇಳುತ್ತಾರೆ. ನಾನು ರಾಜಕೀಯಕ್ಕೆ ಬಂದಾಗ ಧರ್ಮೇಂದ್ರ ಪ್ರಧಾನ್, ಇನ್ನು ರಾಜಕೀಯಕ್ಕೆ ಬಂದಿರಲಿಲ್ಲ. ಅಂತವರು ನಂಗೆ ಎಲೆಕ್ಷನ್ ನಿಲ್ಲಬೇಡ ಎಂದು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ (Rahul Gandhi) ನನಗೆ ಒಂದು ಮಾತು ಹೇಳಿದರು. ಶೆಟ್ರೆ ನೀವು ಭ್ರಷ್ಟಾಚಾರಿ ಅಲ್ಲ ಅದಿಕ್ಕೆ ನಿಮಗೆ ಟಿಕೆಟ್ ಕೊಟ್ಟಿಲ್ಲ ಅಂದ್ರು. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂತು. ಅಷ್ಟೇ ಏಕೆ ಆರು ಬಾರಿ ಗೆಲ್ಲಿಸಿದ ನನ್ನ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಯಿತು. ಅದಕ್ಕೆ ನಾನು ಸಿಡಿದೆದ್ದೆ, ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಇದ್ದರೂ ಸತ್ತಂಗೆ. ಅದು ಗುಲಾಮಗಿರಿಯ ಸಂಕೇತ ಎಂದು ಸಿಡಿಮಿಡಿಗೊಂಡರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 140ಕ್ಕೂ ಅಧಿಕ ಕ್ಷೇತ್ರಗಳನ್ನು ಗೆಲ್ಲುತ್ತದೆ. ಜನರು ನನಗೆ ಹೇಳಿದ್ದಾರೆ. ಶೆಟ್ಟರ್ ನೀವು ಗುಲಾಮಗಿರಿಗೆ ಸೆಡ್ಡು ಹೊಡೆದು ಬಂದಿದ್ದೀರಿ ನಿಮಗೆ ಶಹಬ್ಬಾಶ್ ಅಂತಿದ್ದಾರೆ. ಅಷ್ಟೇ ಸಾಕು ನನ್ನ 30 ವರ್ಷದ ರಾಜಕೀಯ ಜೀವನಕ್ಕೆ. ಶೆಟ್ಟರ್ ಸೋಲಿಸೋಕೆ ಘಟಾನುಘಟಿಗಳು ನನ್ನ ಸೋಲಿಸೋಕೆ ಚಾಲೆಂಜ್ ಮಾಡಿದ್ದಾರೆ. ಅದನ್ನ ಮೆಟ್ಟಿನಿಂತು ಗೆದ್ದು ಬರುತ್ತೇನೆ ಎಂದು ಅಮಿತ್ ಶಾ ಚಾಲೆಂಜ್ ಗೆ ಟಾಂಗ್ ನೀಡಿದರು.