Chikkodi : ಶಾಸಕ ರಮೇಶ ಜಾರಕಿಹೊಳಿ ಕಾಗವಾಡದ ಅನಂತಪುರದಲ್ಲಿ ಪ್ರಚಾರ ನಡೆಸಿದ್ದು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಹರಿಹಾಯ್ದಿದ್ದಾರೆ.
ಅಥಣಿ ವಿಧಾನಸಭಾ ಕ್ಷೇತ್ರದ ಜನರು ಒಳಗೊಳಗೆ ಸವದಿ ಸೋಲಿಸಲು ಸಿದ್ಧರಾಗಿದ್ದಾರೆ. ಅಂಬಾದೇವಿಯ ಆಶೀರ್ವಾದದಿಂದ ಅದೊಂದು ಆದರೆ ಸವದಿ ಹೆಣ ಬಿದ್ದಂಗೆ ಲೆಕ್ಕ. ಸವದಿ ದುಡ್ಡು ಕೊಟ್ಟರೆ ತೆಗೆದುಕೊಳ್ಳೊ ದುಡ್ಡು ಅವಂದಲ್ಲ. ಅದು ನಮ್ಮದು. ನಾವು ಸರ್ಕಾರ ತಂದಿದ್ದರಿಂದ ಆತ ಮಂತ್ರಿಯಾದ. ಅವನಲ್ಲಿರೋದು ನಮ್ಮ ದುಡ್ಡು. ಆ ದುಡ್ಡು ತಗೊಂಡು ಬಿಜೆಪಿಗೆ ಮತ ನೀಡಿ ಎಂದು ಹೇಳಿದ್ದಾರೆ.
ಕೊನೆಯ ಸಮಯದಲ್ಲಿ ಸವದಿಗೆ ಸ್ವಾಭಿಮಾನ ಕಾಡುತ್ತಿದೆ. ಎರಡು ವರ್ಷ ಆತ ಆರಾಮಾಗಿದ್ದ ಚುನಾವಣೆ ಘೋಷಣೆ ಆದ ಬಳಿಕ ಅವನಿಗೆ ಸ್ವಾಭಿಮಾನ ಕಾಡುತ್ತಿದೆ. ಗಂಡಸಾಗಿದ್ದರೆ ಶ್ರೀಮಂತ ಪಾಟೀಲ್, ಮಹೇಶ ಕುಮಟಳ್ಳಿ, ರಮೇಶ ತಂದ ಸರ್ಕಾರದಲ್ಲಿ ಮಂತ್ರಿ ಆಗುವುದಿಲ್ಲ ಎಂದು ಹೇಳಬೇಕಿತ್ತು. ಸವದಿ ಸಾಯ್ಕೊಂಡು ಓಡಿಹೋಗಿ ಮಂತ್ರಿಯಾದ. ಕೊನೆಗೆ ಚುನಾವಣೆ ಘೋಷಣೆಯಾದ ಬಳಿಕ ಅವನಿಗೆ ಸ್ವಾಭಿಮಾನ ಕಾಡಿತು. ಇಂತಹ ಬೋಗಸ್ ಸ್ವಾಭಿಮಾನ ಸವದಿಯದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸವದಿ ದ್ವೇಷ ರಾಜಕಾರಣ ಮಾಡ್ತಾನೆ ಅವನನ್ನ ನಂಬಬೇಡಿ. ನಮಗೆ ವೈಯಕ್ತಿಕವಾಗಿ ದ್ರೋಹ ಮಾಡಿದ್ದಾನೆ ಎಂದು ಕಿಡಿಕಾರಿದ್ದಾನೆ.