ಮೇ 1ರಂದು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್(LPG Cylinder) ಬೆಲೆಯಲ್ಲಿ ಭಾರೀ ಕಡಿಮೆಯಾಗಿದ್ದು, ಗ್ರಾಹಕರು ಸಂತಸ ಪಡುವಂತೆ ಆಗಿದೆ. ಮೇ 1, 2023 ರಂದು ವಾಣಿಜ್ಯ LPG ಸಿಲಿಂಡರ್‌ಗಳ ದರವನ್ನು ಕಡಿತಗೊಳಿಸಿದ ನಂತರ, ಅದರ ಬೆಲೆಗಳು ಇಡೀ ದೇಶದಲ್ಲಿ ಜಾರಿಗೆ ಬಂದಿವೆ. ಗ್ಯಾಸ್ ಸಿಲಿಂಡರ್ ಬೆಲೆ ಒಂದೇ ಬಾರಿಗೆ 171.50 ರೂ. ಇಳಿಕೆ ಕಂಡಿದೆ.

ಸದ್ಯ 14.2 ಕೆಜಿ ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ ವಾಣಿಜ್ಯ LPG ಸಿಲಿಂಡರ್ 1856.50 ರೂ. ಇದೆ. ಕೋಲ್ಕತ್ತಾದಲ್ಲಿ 1960.50 ರೂ., ಮುಂಬಯಿನಲ್ಲಿ 1808.50 ರೂ. ಮತ್ತು ಚೆನ್ನೈನಲ್ಲಿ 2021.50 ರೂ. ಇದೆ.
ಈ ಹಿಂದೆ ಏಪ್ರಿಲ್ 1ರಂದು ಸಿಲೆಂಡರ್ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಗ್ಯಾಸ್ ಸಿಲಿಂಡರ್ ಸುಮಾರು 92 ರೂ.ಗಳಷ್ಟು ಅಗ್ಗವಾಗಿದ್ದು, ಮಾರ್ಚ್ ನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 350 ರೂ.ಗಿಂತ ಹೆಚ್ಚಾಗಿದೆ.

ಕೋಲ್ಕತ್ತಾದಲ್ಲಿ ವಾಣಿಜ್ಯ ವಲಯದಲ್ಲಿ ಬಳಸಲಾಗುವ 19 ಕೆಜಿ ಎಲ್‌ಪಿಜಿ ಮತ್ತು ಆರ್‌ಎಸ್‌ಪಿ ಗ್ಯಾಸ್ ಸಿಲಿಂಡರ್‌ನ ಹೊಸ ಬೆಲೆ 1,960.50 ರೂ.ಗೆ ಇಳಿದಿದೆ. ಮೇ. 1ರಿಂದ ಈ ಪರಿಷ್ಕರ ಬೆಲೆ ಚಾಲ್ತಿಯಲ್ಲಿರುತ್ತದೆ.