Kornersite

International Just In

Dog faith: 27 ದಿನಗಳ ನಂತರ ಮಾಲೀಕನನ್ನು ಹುಡುಕಿಕೊಂಡು ಬಂದ ನಂಬಿಕಸ್ಥ ಶ್ವಾನ!

ಜಗತ್ತಿನಲ್ಲಿ ನಿಯತ್ತಿನ ವಸ್ತು, ಪ್ರಾಣಿ ಯಾವುದು ಎಂದು ಹೇಳುತ್ತಿದ್ದಂತೆ ಎಲ್ಲರಿಗೂ ಥಟ್ಟಂತೆ ನೆನಪಾಗುವುದೇ ನಾಯಿತ. ಒಂದು ಹೊತ್ತಿನ ಊಟ ಹಾಕಿದ್ನಲ್ಲಾ ಅಂತಾ ಕಡೇತನಕ ನೆನಪಿಟ್ಕೊಳ್ಳುತ್ತದೆ ಅಂತಾರೆ. ನಾಯಿ ಎಷ್ಟು ನಿಯತ್ತಾಗಿ ಇರುತ್ತದೆ ಅಂದರೆ, ಅದನ್ನು ಎಲ್ಲಿಯೇ ಬಿಟ್ಟು ಬಂದರೂ ಅದು ಮತ್ತೆ ಬಂದು ಸೇವೆ ಮಾಡುತ್ತದೆ.

ಉತ್ತರ ಐರ್ಲೆಂಡ್‌ ನಲ್ಲಿ ನಾಯಿಯ ನಿಯತ್ತಿನ ಘಟನೆಯೊಂದು ಬೆಳಕಿಗೆ ಬಂದಿದ್ದು, ಕೂಪರ್ ಎಂಬ ಹೆಸರಿನ ಗೋಲ್ಡನ್ ರಿಟ್ರೈವರ್ ಜಾತಿಯ ನಾಯಿಯೊಂದು 64 ಕಿ.ಮೀ ದೂರ ಕ್ರಮಿಸಿ ಮರಳಿ ಯಜಮಾನನ ಮನೆಗೆ ಹಿಂದಿರುಗಿದೆ. ನಾಯಿಯ ಮಾಲೀಕ ಕೆಲ ಸಮಯದ ಹಿಂದ ಕೂಪರ್‌ನನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು. ಉತ್ತರ ಐರ್ಲೆಂಡ್‌ನ ಕೌಂಟಿ ಟೈರೋನ್‌ ನಲ್ಲಿರುವ ವ್ಯಕ್ತಿ ತನ್ನ ಕಾರಿನ ಮೂಲಕ ನಾಯಿಯನ್ನು ಕರೆದುಕೊಂಡು ಬರುವುದಾಗಿ ಮಾಲೀಕನಿಗೆ ತಿಳಿಸಿದ್ದರು.


ಹೀಗೆ ಖರೀದಿ ಮಾಡಿದ ನಂತರ ಕೂಪರ್‌ನನ್ನು ತನ್ನ ಕಾರ್‌ನಲ್ಲಿ ಕೂರಿಸಿ ಮನೆಗೆ ಹೊರಟಿದ್ದಾರೆ. ಇತ್ತ ತನ್ನ ನೆಚ್ಚಿನ ಶ್ವಾನವನ್ನು ಒಲ್ಲದ ಮನಸ್ಸಿನಿಂದ ಕೊಟ್ಟರೂ ಭಾವುಕರಾದ ಮಾಲೀಕ ದುಖದಿಂದಲೇ ಮನೆಯೊಳಗೆ ಹೋಗಿದ್ದಾನೆ. ಇತ್ತ ಕೂಪರ್‌ನನ್ನು ಕೂರಿಸಿಕೊಂಡು ಹೊರಟ ಕಾರು ಕೌಂಟಿ ಟೈರೋನ್‌ ನತ್ತ ಸಾಗಿತ್ತು. ಸುಮಾರು 64 ಕಿಲೋ ಮೀಟರ್‌ ದೂರದಿಂದ ಕೂಪರ್‌ನನ್ನು ಮನೆಗೆ ತೆಗೆದುಕೊಂಡು ಬಂದ ಎರಡನೇ ಮಾಲೀಕ ಇನ್ನೇನು ಕಾರಿನಿಂದ ಇಳಿಸಬೇಕು ಎಂಬಷ್ಟರಲ್ಲಿ ಒಮ್ಮೆಲೇ ಕಾರಿನಿಂದ ಜಿಗಿದ ಕೂಪರ್‌, ಕ್ಷಣಮಾತ್ರದಲ್ಲಿ ಮಾಯವಾಗಿದೆ. ಮಾಲೀಕ ನೋಡುನೋಡುತ್ತಿದ್ದಂತೆ ಕೂಪರ್ ನಿಮ್ಮ ಸಹವಾಸವೇ ಬೇಡ ಎನ್ನುವಂತೆ ರಭಸವಾಗಿ ಓಡಿ ಅಲ್ಲಿಂದ ಕಣ್ತಪ್ಪಿಸಿದೆ. ಕಂಗಾಲಾದ ಮಾಲೀಕ ಪುನಃ ಕಾರ್‌ನಲ್ಲಿ ನಾಲ್ಕೈದು ಕಿಲೋಮೀಟರ್ ಹುಡುಕಿಕೊಂಡು ಬಂದರೂ ಸಿಕ್ಕಿಲ್ಲ.


ಕೂಡಲೇ ಕೂಪರ್‌ನನ್ನು ಸಾಕಿ ಬೆಳೆಸಿದ ಒಡೆಯನಿಗೆ ಕರೆ ಮಾಡಿದ ಆತ ನಾಯಿ ಕಾಣೆಯಾಗಿರುವ ಬಗ್ಗೆ ತಿಳಿಸಿದ್ದಾನೆ. ಇದರಿಂದ ಅವರಿಗೂ ಗಾಬರಿಯಾಗಿದೆ. ಆಗ ಮೂಲ ಮಾಲೀಕ ನಾಯಿ ನಮ್ಮ ಮನೆಗೆ ಬಂದರೆ ತಿಳಿಸುವಾದಿಗ ಹೇಳಿದ್ದರು. 2 ವಾರ ಕಳೆದರೂ ಅದು ಸಿಕ್ಕಿರಲಿಲ್ಲ.
ಬರೋಬ್ಬರಿ 27 ದಿನಗಳ ನಂತರ ಕೂಪರ್ ಮರಳಿ ತನ್ನ ಮೊದಲ ಯಜಮಾನನ ಮನೆಯ ದಾರಿ ಹಿಡಿದು ಬರುತ್ತಿತ್ತು. ಕೂಪರ್‌ ನನ್ನು ಕಂಡು ಮನೆಯವರಿಗೆ ಅಚ್ಚರಿಯಾಗಿದ್ದು, ಮನೆಗೆ ಬರುತ್ತಿದ್ದಂತೆ ಮನೆಮಂದಿ ಅದನ್ನು ಮುದ್ದಾಡಿ ಭಾವುಕರಾಗಿದ್ದಾರೆ.


27 ದಿನದ ನಂತರ ಬರೋಬ್ಬರಿ 64 ಕಿಮೀ ನಡೆದಾಡುತ್ತಲೇ ಬಂದ ಕೂಪರ್ ತನ್ನ ಹೊಟ್ಟೆಗೂ ಸರಿಯಾಗಿ ಆಹಾರ ಸಿಗದೆ ಬಳಲಿತ್ತು. ದೇಹ ತೂಕವೂ ಕಮ್ಮಿಯಾಗಿತ್ತು. ಸದ್ಯ ಮೊದಲ ಮಾಲೀಕನೇ ಕೂಪರ್‌ನನ್ನು ಆರೈಕೆ ಮಾಡುತ್ತಿದ್ದು, ಅಷ್ಟು ದೂರದಿಂದ ವಾಪಸ್ ಮನೆಗೆ ಬಂದ ಕೂಪರ್‌ನ ನಿಯತ್ತು, ಪ್ರೀತಿ, ಆತನ ಬದ್ಧತೆಗೆ ಮನೆ ಮಾಲೀಕರ ಕಣ್ಣಂಚು ಒದ್ದೆಯಾಗಿದೆ.

You may also like

International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ