
ಪ್ರತಿಯೊಬ್ಬ ಮಹಿಳೆ ಸ್ವಾವಲಂಭಿಯಾಗಿರಬೇಕು ಎಂದು ಬಯಸುತ್ತಾಳೆ. ತನ್ನ ಸಣ್ಣ ಪುಟ್ಟ ಖರ್ಚುಗಳನ್ನ ಯಾರ ಮುಂದೆ ಕೈ ಚಾಚದೇ ತಾನೇ ನಿಭಾಯಿಸಬೇಕು ಎನ್ನುವ ಬಯಕೆ ಇರುತ್ತದೆ. ಹಲವು ಮಹಿಳೆಯರು ಕಚೇರಿಗೆ ಹೋಗಿ ಕೆಲಸ ಮಾಡುತ್ತಾರೆ. ಆದ್ರೆ ಇನ್ನು ಕೆಲವರಿಗೆ ಮನೆಯಲ್ಲಿ ಹೊರಗೆ ಹೋಗಿ ಕೆಲಸ ಮಾಡಲು ಹಲವು ಅಡೆತಡೆಗಳು ಇರುತ್ತವೆ. ಸಂಸಾರದ ನೌಕೆ ಸಾಗಿಸುತ್ತ ತನ್ನ ಆಸೆ ಆಕಾಂಕ್ಷೆಗಳನ್ನ ಬದಿಗೊತ್ತಿ ಜೀವನ ನಡೆಸುತ್ತಿರುತ್ತಾಳೆ. ಆದ್ರೆ ಎಷ್ಟೋ ಮಹಿಳೆಯರಿಗೆ ಮನೆಯಲ್ಲೇ ಕುಳಿತು ಹೈ ತುಂಬ ಹಣ ಗಳಿಸಬಹುದು ಅನ್ನೋದು ಗೊತ್ತಿರಲ್ಲ. ಅಂತವರಿಗೆ ಇಲ್ಲಿದೆ ಕೆಲವು ಟಿಪ್ಸ್.
ಮನೆಯಲ್ಲೇ ಕುಳಿತು ಹಣ ಗಳಿಸಬಹುದು ಅಂದ್ರೆ ಫುಲ್ ಡೇ ಬೇಕಾಗಿಲ್ಲ. ಬಿಡುವಿನ ಸಮಯದಲ್ಲಿ ಕೆಲಸ ಮಾಡಿದ್ರೆ ಸಾಕು. ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ಇದ್ದರೆ ಕೆಲಸ ಇನ್ನು ಸುಲಭ. ಈಗ ಜಗತ್ತು ಡಿಜಿಟಲ್ (Digital) ಆಗಿದೆ. ಅನೇಕ ಕಂಪನಿಗಳು ಆನ್ ಲೈನ್ (Online) ಕೆಲಸಕ್ಕೆ ಆದ್ಯತೆ ಕೊಡುತ್ತಿದೆ. ಇದೇ ಅವಕಾಶವನ್ನು ಬಳಸಿಕೊಂಡು ಮಹಿಳೆಯರು ಪ್ರತಿ ತಿಂಗಳು ಹಣ ಗಳಿಸಬಹುದು.
ಅಫಿಲಿಯೇಟ್ ಮಾರ್ಕೆಟಿಂಗ್ Affiliate Marketing
ಅಫಿಲಿಯೇಟ್ ಮಾರ್ಕೆಟಿಂಗ್ ಈ ವರ್ಡ್ ನ್ನು ನೀವು ಕೇಳಿರ್ತೀರಾ..ಇತ್ತೀಚೆಗೆ ಪದೇ ಪದೇ ಕೇಳಿ ಬರುವಂತಹ ಪದ ಇದು. ಇ-ಕಾಮರ್ಸ್ ಸೈಟ್ ಗೆ ಅಫಿಲಿಯೇಟ್ ಮಾರ್ಕೆಟಿಂಗ್ ಮಾಡುವ ಮೂಲಕ ಹಣ ಗಳಿಸಬಹುದು. ಇ-ಕಾಮರ್ಸ್ ಸೈಟ್ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡಬೇಕು. ಲಿಂಕ್ ಗಳನ್ನ್ ಸೋಶಿಯಲ್ ಮಿಡಿಯಾ ಪೇಜ್ ಗಳಲ್ಲಿ ಅಪ್ ಲೋಡ್ ಮಾಡಬೇಕು. ಆ ಲಿಂಕ್ ಮೇಲೆ ಜನರು ಕ್ಲಿಕ್ ಮಾಡಿ ಉತ್ಪನ್ನಗಳನ್ನ ಖರೀದಿ ಮಾಡಿದ್ರೆ ನಿಮಗೆ ಕಮಿಷನ್ ಬರುತ್ತದೆ. ಇದಕ್ಕಾಗಿ ಇ-ಕಾಮರ್ಸ್ ಕಂಪನಿಯ ವೆಬ್ ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬೇಕು.
ಆನ್ ಲೈನ್ ಸರ್ವೆ Online Survey
ಆನ್ ಲೈನ್ ಸರ್ವೆಗೆ ಈಗ ಹೆಚ್ಚಿನ ಬೇಡಿಕೆ ಇದೆ. ಮನೆಯಲ್ಲೇ ಕುಳಿತು ಸರ್ವೆ ಮಾಡಬಹುದು. ಇದರಿಂದಲೂ ಸಹ ಮನೆಯಲ್ಲೇ ಕುಳಿತು ಹಣ ಗಳಿಸಬಹುದು. ಕಂಪನಿಗಳು ಜನರಿಂದ ತಮ್ಮ ಉತ್ಪನ್ನಗಳ ಪೂರ್ವವೀಕ್ಷಣೆ ತೆಗೆದುಕೊಳ್ಳಲು ಬಯಸುತ್ತದೆ. ಈ ಸರ್ವೆಯ ಅನುಗುಣವಾಗಿ ಉತ್ಪನ್ನಗಳನ್ನ ಮಾರಾಟ ಮಾಡುತ್ತದೆ.
ವಾಟ್ಸ್ ಅಪ್ ಬಿಸಿನೆಸ್ WhatsApp business
ವಾಟ್ಸ್ ಅಪ್ ಮೂಲಕವೂ ನೀವು ಮನೆಯಲ್ಲೇ ಕುಳಿತು ಹಣ ಗಳಿಸಬಹುದು. ಸೀರೆ, ಡ್ರೆಸ್, ಜ್ಯೂವೆಲರಿ, ಬ್ಯಾಗ್ ಹೀಗೆ ಅನೇಕ ಉತ್ಪನ್ನಗಳನ್ನ ಮಾರಾಟ ಮಾಡಬಹುದು. ಯಾವುದೇ ಉತ್ಪನ್ನಗಳನ್ನ ವಿತರಕರಿಂದ ಜಸ್ಟ್ ಮಾರಾಟ ಮಾಡುವ ವಸ್ತುಗಳನ್ನ ಫೋಟೋ ತೆಗೆದುಕೊಳ್ಳಿ, ಆ ಫೋಟೋಗಳನ್ನ ವಾಟ್ಸ್ ಅಪ್ ಗ್ರೂಪ್ ನಲ್ಲಿ ಶೇರ್ ಮಾಡಿ. ಜನರು ಆರ್ಡರ್ ಮಾಡಿದ್ದನ್ನ ವಿತರಕರಿಗೆ ತಿಳಿಸಿದರೆ ಅವರೇ ಕೋರಿಯರ್ ಮಾಡುತ್ತಾರೆ. ನೀವು ಕುಳಿತಲ್ಲೇ ಕಮಿಷನ್ ಹಣವನ್ನು ಪಡೆಯಬಹುದು.