Bangalore : ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಇಳಿಮುಖ ಮುಂದುವರೆಯುತ್ತಿದ್ದು, ಮೇ 1 ಹಾಗೂ 2ರಂದು ಈ ಎರಡೂ ಲೋಹಗಳ ಬೆಲೆ ಇಳಿಕೆ ಕಂಡಿದೆ. ಕಳೆದ ಒಂದು ವಾರದಿಂದಲೂ ಚಿನ್ನ ಹಾಗೂ ಬೆಳ್ಳಿ (Gold and Silver Price) ದುಬಾರಿಯಾಗಿಲ್ಲ ಎಂಬುವುದು ಸಂತಸದ ಸಂಗತಿ.
ಅಕ್ಷಯ ತೃತೀಯ ದಿನದಿಂದಲೂ ಚಿನ್ನದ ಬೆಲೆ ಬಹುತೇಕ ಇಳಿಕೆಯ ಹಾದಿಯಲ್ಲಿದೆ. ಭಾರತ ಹಾಗೂ ವಿದೇಶಗಳ ಚಿನಿವಾರ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಷ್ಟೊಂದು ಏರಿಳಿತಗಳಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,700 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 60,760 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,600 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,750 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂ 8,020 ಇದೆ.
ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ. ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 2ಕ್ಕೆ):
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 55,700 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 60,760 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 760 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,840 ರಿಂಗಿಟ್ (52,127 ರುಪಾಯಿ)
ದುಬೈ: 2222.50 ಡಿರಾಮ್ (49,483 ರುಪಾಯಿ)
ಅಮೆರಿಕ: 610 ಡಾಲರ್ (49,868 ರುಪಾಯಿ)
ಸಿಂಗಾಪುರ: 827 ಸಿಂಗಾಪುರ್ ಡಾಲರ್ (50,507 ರುಪಾಯಿ)
ಕತಾರ್: 2,285 ಕತಾರಿ ರಿಯಾಲ್ (51,303 ರೂ)
ಓಮನ್: 242.50 ಒಮಾನಿ ರಿಯಾಲ್ (51,415 ರುಪಾಯಿ)
ಕುವೇತ್: 190 ಕುವೇತಿ ದಿನಾರ್ (51,174 ರುಪಾಯಿ)