Kornersite

Crime International Just In

Firing: ಶಾಲೆಯಲ್ಲಿ ಫೈರಿಂಗ್ ಮಾಡಿ 8 ಮಕ್ಕಳ ಸಾವಿಗೆ ಕಾರಣನಾದ ವಿದ್ಯಾರ್ಥಿ! ಹಲವರ ಸ್ಥಿತಿ ಗಂಭೀರ!

ಬಾಲಕನೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ 8 ಜನ ಮಕ್ಕಳು ಸಾವನ್ನಪ್ಪಿರುವ ಘಟನೆ ಸರ್ಬಿಯಾದ (Serbia) ರಾಜಧಾನಿ ಬೆಲ್‌ಗ್ರೇಡ್‌ನ (Belgrade) ಶಾಲೆಯೊಂದರಲ್ಲಿ ನಡೆದಿದೆ.

ಅಲ್ಲಿನ ಬೆಲ್‌ ಗ್ರೇಡ್‌ ನ ವ್ಲಾಡಿಸ್ಲಾವ್ ರಿಬ್ನಿಕರ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 6 ಮಕ್ಕಳು ಹಾಗೂ ಶಿಕ್ಷಕರು ಗಾಯಗೊಂಡಿದ್ದಾರೆ. ಸದ್ಯ ಗುಂಡು ಹಾರಿಸಿದ್ದ 7ನೇ ತರಗತಿಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕ ತನ್ನ ತಂದೆಯ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳು ಹರಿದಾಡುತ್ತಿದ್ದು, ಪೊಲೀಸರು ಆರೋಪಿ ಬಾಲಕನ ತಲೆಯನ್ನು ಮುಚ್ಚಿ ತಮ್ಮ ವಾಹನದೆಡೆಗೆ ಕರೆದುಕೊಂಡು ಹೋಗಿದ್ದಾರೆ. ಪೋಷಕರು ಭಯದಿಂದ ತಮ್ಮ ಮಕ್ಕಳನ್ನು ಹುಡುಕಿಕೊಂಡು ಶಾಲೆಗೆ ಧಾವಿಸಿದ್ದಾರೆ.

ಸರ್ಬಿಯಾದಲ್ಲಿ ಇಂತಹ ಸಾಮೂಹಿಕ ಗುಂಡಿನ ದಾಳಿಗಳು ತೀರಾ ಅಪರೂಪವಾಗಿದೆ. ಆದರೂ 1990ರ ಯುದ್ಧದ ಬಳಿಕ ದೇಶದಲ್ಲಿ ಉಳಿದಿರುವ ಶಸ್ತ್ರಾಸ್ತ್ರಗಳ ಸಂಖ್ಯೆಯ ಬಗ್ಗೆ ತಜ್ಞರು ಪದೇ ಪದೇ ಎಚ್ಚರಿಸಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ