Rwanda : ಉತ್ತರ ಮತ್ತು ಪಶ್ಚಿಮ ರುವಾಂಡಾದಲ್ಲಿ (Rwanda) ಭಾರೀ ಪ್ರವಾಹ (Flood) ಉಂಟಾಗಿದ್ದು, ಘಟನೆಯಲ್ಲಿ ಕನಿಷ್ಠ 109 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಆ ರಾಷ್ಟ್ರದಲ್ಲಿ ಕಳೆದ ಒಂದೇ ರಾತ್ರಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉತ್ತರ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಪ್ರವಾಹವ ಸೃಷ್ಟಿಯಾಗಿ ಪಶ್ಚಿಮ ಪ್ರಾಂತ್ಯದಲ್ಲಿ 95 ಜನ ಮತ್ತು ಉತ್ತರ ಪ್ರಾಂತ್ಯದಲ್ಲಿ (Northern Province) 14 ಜನರು ಸಾವನ್ನಪ್ಪಿದ್ದಾರೆ. ಪ್ರವಾಹಕ್ಕೆ ಹಲವಾರು ಮನೆಗಳು ಕೊಚ್ಚಿ ಹೋಗಿವೆ. ರಸ್ತೆಗಳು ಸಂಪೂರ್ಣ ಬಂದ್ ಆಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನರ ರಕ್ಷಣಾ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಜನರಿಗೆ ಸೂಕ್ತ ಆಹಾರ ಹಾಗೂ ಔಷಧಗಳನ್ನು ಸರಬರಾಜು ಮಾಡಲಾಗುತ್ತಿದೆ. ಮೃತಪಟ್ಟವರನ್ನು ಹೂಳಲು ಕ್ರಮಕೈಗೊಳ್ಳಲಾಗಿದೆ ಎಂದು ತುರ್ತು ನಿರ್ವಹಣೆಯ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.
2020 ರಲ್ಲಿ ಪೂರ್ವ ಆಫ್ರಿಕಾದಲ್ಲಿ (Africa) ಸುರಿದಿದ್ದ ಭಾರೀ ಮಳೆಯಿಂದಾಗಿ ರುವಾಂಡಾದಲ್ಲಿ ಕನಿಷ್ಠ 65 ಜನರು ಸಾವನ್ನಪ್ಪಿದ್ದರು.