Bangalore : ದೇಶದಲ್ಲಿ ಕೆಲವು ದಿನಗಳಿಂದ ಯಥಾಸ್ಥಿತಿ ಮುಂದುವರೆಸಿರುವ ಚಿನ್ನದ ದರ ಇಂದು ಕೂಡ ಹಾಗೆಯೇ ಉಳಿದಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಗ್ರಾಂಗೆ 10ಪೈಸೆಯಷ್ಟು ಏರಿಕೆಯಾಗಿದೆ.
ಅಕ್ಷಯ ತೃತೀಯ ದಿನದಿಂದಲೂ ಚಿನ್ನದ ಬೆಲೆ ಬಹುತೇಕ ಇಳಿಕೆಯ ಹಾದಿಯಲ್ಲಿದೆ. ಭಾರತ ಹಾಗೂ ವಿದೇಶಗಳ ಚಿನಿವಾರ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಷ್ಟೊಂದು ಏರಿಳಿತಗಳಾಗಿಲ್ಲ. ದೇಶದಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,700 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 60,760 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,610 ರೂ. ಇದೆ.
ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ. ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70 ಸಾವಿರ ರೂ. ಗಡಿ ದಾಟಬಹುದು ಎನ್ನಲಾಗುತ್ತಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 3ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,700 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,760 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 761 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ):
ಮಲೇಷ್ಯಾ: 2,840 ರಿಂಗಿಟ್ (52,127 ರುಪಾಯಿ)
ದುಬೈ: 2222.50 ಡಿರಾಮ್ (49,483 ರುಪಾಯಿ)
ಅಮೆರಿಕ: 610 ಡಾಲರ್ (49,936 ರುಪಾಯಿ)
ಸಿಂಗಾಪುರ: 824 ಸಿಂಗಾಪುರ್ ಡಾಲರ್ (50,490 ರುಪಾಯಿ)
ಕತಾರ್: 2,290 ಕತಾರಿ ರಿಯಾಲ್ (51,484 ರೂ)
ಓಮನ್: 242 ಒಮಾನಿ ರಿಯಾಲ್ (51,458 ರುಪಾಯಿ)
ಕುವೇತ್: 190 ಕುವೇತಿ ದಿನಾರ್ (50,725 ರುಪಾಯಿ)