Kornersite

Bengaluru Just In Karnataka Politics State

Karnataka Assembly Election: ಜೈ ಭಜರಂಗ ಬಲಿ ಘೋಷಣೆ ಮೂಲಕ ಮಾತು ಆರಂಭಿಸಿದ ಪ್ರಧಾನಿ!

Mangalore : ರಾಜ್ಯ ರಾಜಕೀಯ ಕಣ ರಂಗೇರಿದ್ದು, ಭಜರಂಗದಳ ಬ್ಯಾನ್ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮದ್ಯೆ ಬಿಗ್ ಫೈಟ್ ನಡೆಯುತ್ತಿದೆ. ಇಂದು ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಜರಂಗಬಲಿ ಕೀ ಜೈ (Jai Bajrangbali) ಎಂದು ಹೇಳುವುದರ ಮೂಲಕ ಭಾಷಣ ಆರಂಭಿಸಿದ್ದಾರೆ.

ಭಾರತ್‌ ಮಾತಾ ಕೀ ಜೈ ಎಂದು ಹೇಳಿ ಭಾಷಣ ಆರಂಭಿಸಿತ್ತು. ಆದರೆ, ಮೂಲ್ಕಿ ಪ್ರಚಾರ ಸಭೆಯಲ್ಲಿ ಭಾರತ್‌ ಮಾತಾಕೀ ಜೈ ಎಂದು ಹೇಳಿದ ಬಳಿಕ ತುಳುವಿನಲ್ಲಿ ಮಾತು ಆರಂಭಿಸಿದ್ದಾರೆ. ಪರಶುರಾಮ ಕ್ಷೇತ್ರದ ತುಳು ಅಪ್ಪೆನ ಮೋಕೆದಾ ಜೊಕುಲೆಗೂ ಸೊಲ್ಮೆಲ್‌ (ಪರಶುರಾಮ ಕ್ಷೇತ್ರದ ತಾಯಿಯ ಪ್ರೀತಿಯ ಮಕ್ಕಳಿಗೆ ನಮಸ್ಕಾರಗಳು) ಎಂದು ಹೇಳಿ ಭಾಷಣ ಪ್ರಾರಂಭಿಸಿದರು.

ಮೋದಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ದಕ್ಷಿಣ ಕನ್ನಡ ಬಿಜೆಪಿ ಮುಂದಾಗಿತ್ತು. ಆದರೆ ನೆರೆದಿದ್ದ ಸಭಿಕರು ಕನ್ನಡ ಭಾಷಾಂತರ ಬೇಡ ಎಂದು ಹೇಳಿದರು. ಹೀಗಾಗಿ ಸಂತಸ ವ್ಯಕ್ತಪಡಿಸಿದ ಪ್ರಧಾನಿ, ಭಾಷಣ ಆರಂಭಿಸಿದರು. ಪರುಶುರಾಮ ಕ್ಷೇತ್ರ, ಮೂಲ್ಕಿ ವೆಂಕಟರಣ ದೇವಸ್ಥಾನ, ನಾರಾಯಣ ಗುರು, ತೀರ್ಥಂಕರನ್ನು ಉಲ್ಲೇಖಿಸಿ ಮಾತು ಆರಂಭಿಸಿದರು. ಕೊನೆಗೂ ಜೈ ಬಜರಂಗ ಬಲಿ ಘೋಷಣೆ ಬಳಿಕ ವಂದೇ ಮಾತರಂ ಘೋಷಣೆ ಕೂಗಿ ಮೋದಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಏನಿದೆ?
ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗ ಬಜರಂಗದಳ ಮತ್ತು ಪಿಎಫ್‌ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು