ಖ್ಯಾತ ನಿರ್ದೇಶಕ (Director) ಹಾಗೂ ನಟ ಮನೋಬಾಲಾ (Manobala) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾಪೆ. ಅವರು ಕಳೆದ ಕೆಲವು ದಿನಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇವರು ತಮಿಳು ಭಾಷೆಯ ಖ್ಯಾತ ನಿರ್ದೇಶಕ ಹಾಗೂ ನಟರಾಗಿದ್ದರು. ಭಾರತಿರಾಜ ಅವರ ‘ಪುತಿಯ ವಾರ್ಪುಗಳ್’ ಚಿತ್ರದ ಮೂಲಕ ಮನೋಬಾಲ ನಟನಾ ರಂಗಕ್ಕೆ ಕಾಲಿಟ್ಟಿದ್ದರು. ಆನಂತರ ಭಾರತಿಪುರ ನಿರ್ದೇಶನದ ಚಿತ್ರಗಳಿಗೆ ಸಹಾಯ ನಿರ್ದೇಶಕರೂ ಆಗಿದ್ದರು. ಇಲ್ಲಿಯವರೆಗೆ ಬರೋಬ್ಬರಿ 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾದಲ್ಲಿ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಅವರಿಗೆ ಕನ್ನಡದ ನಂಟು ಕೂಡ ಇತ್ತು. ವಿಷ್ಣುವರ್ಧನ್ ಅವರ ಡಿಸೆಂಬರ್ 31 ರ ಸಿನಿಮಾಕ್ಕೆ ಮನೋಬಾಲಾ ಅವರ ನಿರ್ದೇಶನವಿದೆ. ಪತ್ನಿ ಉಷಾ ಮತ್ತು ಪುತ್ರ ಹರೀಶ್ ಅವರನ್ನು ಅಗಲಿದ್ದಾರೆ. ಮನೋಬಾವಾ ನಿಧನಕ್ಕೆ ಇಡೀ ಚಿತ್ರರಂಗವೇ ಕಣ್ಣೀರಿಡುತ್ತಿದೆ.