Koppal : ಡಿ.ಕೆ. ಶಿವಕುಮಾರ್ (DK Shivakumar) ಹನುಮನ ಸುದ್ದಿಗೆ ಬಂದಿದ್ದಕ್ಕೆ ಹೆಲಿಕಾಪ್ಟರ್ ಗ್ಲಾಸ್ ಪುಡಿಪುಡಿಯಾಗಿದೆ. ಮತ್ತೆ ಇದೇ ರೀತಿ ತಂಟೆಗೆ ಬಂದರೆ, ತಂ ನೀವೂ ಪತನವಾಗಲಿದ್ದೀರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಇನ್ನೊಮ್ಮೆ ಹುಟ್ಟಿ ಬಂದರೂ ಭಜರಂಗದಳ (Bajaranga Dal) ಬ್ಯಾನ್ ಮಾಡಲು ಆಗುವುದಿಲ್ಲ. ಭಜರಂಗದಳ ಭಯೋತ್ಪಾದನೆ ಮಾಡುವುದಿಲ್ಲ. ಅದು ದೇಶ ಸೇವೆ ಮಾಡುವ ಸಂಘಟನೆ ಎಂದು ಹೇಳಿದ್ದಾರೆ.
ಭಾರತದ ರಾಮ ಮೋದಿ, ಹನುಮ ಯೋಗಿ, ಲಕ್ಷ್ಮಣ ಅಮಿತ್ ಶಾ ಇದ್ದಾರೆ. ಹೀಗಿರುವಾಗ ಭಜರಂಗದಳದ ತಂಟೆಗೆ ಬಂದರೆ ತಿಹಾರ್ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸೋಲಿಸಲು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಬ್ಬರೇ ಸಾಕು. ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸ್ ಹಾಳಾಗುತ್ತದೆ. ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಹೋದಲ್ಲೆಲ್ಲಾ ಬಿಜೆಪಿ ಪರ ಪ್ರಚಾರ ನಡೆಸುತ್ತಾರೆ ಎಂದು ವ್ಯಂಗ್ಯವಾಡಿದರು.