Mysore : ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪರ ಚಂದನವನದ ಸ್ಟಾರ್ ಗಳು ವರುಣಾ ಕ್ಷೇತ್ರದಲ್ಲಿ (Varuna Constituency) ಭರ್ಜರಿ ಪ್ರಚಾರ ನಡೆಸಿದರು.
ನಟಿ ರಮ್ಯಾ (Ramya), ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್, ದುನಿಯಾ ವಿಜಯ್ (Dunia Vijay) ಹಾಗೂ ನಿಶ್ಚಿಕಾ ನಾಯ್ದು ವರುಣಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು.

ನಿಶ್ವಿಕಾ ನಾಯ್ಡು (Nishvika Naidu), ಸಿದ್ದರಾಮಯ್ಯ ಅಪ್ಪಾಜಿ ಅವರ ಪರ ಕ್ಷೇತ್ರದಲ್ಲಿ ಜನಾಭಿಪ್ರಾಯ ಉತ್ತಮವಾಗಿದೆ. ಅವರ ಮೇಲಿನ ಪ್ರೀತಿ ಜನರಲ್ಲಿ ತುಂಬಿ ತುಳುಕುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದವರು ಮಾಡಿರುವ ಕೆಲಸಗಳ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿ, ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.