ಇಂಫಾಲ್: ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಹೀಗಾಗಿ ಪ್ರತಿಭಟನಾಕಾರರು ಬಗ್ಗದಿದ್ದರೆ ಶೂಟೌಟ್ ಮಾಡುವಂತೆ ಅಧಿಕಾರಿಗಳಿಗೆ (Manipur violence) ಸರ್ಕಾರ ಆದೇಶ ಹೊರಡಿಸಿದೆ.

ಮಣಿಪುರದಲ್ಲಿನ ಪ್ರತಿಭಟನೆ ಕ್ಷಣಕ್ಷಣಕ್ಕೂ ಹಿಂಸಾಚಾರ ಪಡೆಯುತ್ತಿದೆ. ಈ ಕಿಚ್ಚು ರಾಜಧಾನಿ ಇಂಭಾಲ್ ಗೂ ಹರಡುತ್ತಿದೆ. ಹೀಗಾಗಿ ಸರ್ಕಾರವು ಭದ್ರತೆಯನ್ನು ಬಲಪಡಿಸಲು ಸೂಚನೆ ನೀಡಿದೆ. 55 ಸೇನಾ ಕಾಲಂಗಳನ್ನು ನಿಯೋಜಿಸಲಾಗಿದೆ.

ಈಗಾಗಲೇ ಪ್ರತಿಭಟನೆ ನಡೆಸುತ್ತಿರುವವರನ್ನು ಎಲ್ಲ ರೀತಿಯಲ್ಲಿಯೂ ಮನವೊಲಿಸಿ, ಎಚ್ಚರಿಕೆ ನೀಡಿ, ಸಮಂಜಸವಾದ ಬಲ ಪ್ರಯೋಗ ಮಾಡಿ. ಇದ್ಯಾವುದಕ್ಕೂ ಬಗ್ಗದೇ ಹೋದರೆ, ವಿಪರೀತ ಪರಿಸ್ಥಿತಿ ಪ್ರಕರಣಗಳಲ್ಲಿ ಗುಂಡು ಹಾರಿಸಿ ಎಂದು ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್, ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಎಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗಳಿಗೆ ಆದೇಶ ಹೊರಡಿಸಲಾಗಿದೆ.
ಎಸ್ಟಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ಭುಗಿಲೆದ್ದಿದೆ. ಮೇಟಿ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸಬೇಕು ಎಂದು ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆ ತೀವ್ರ ಹಿಂಸಾರೂಪಕ್ಕೆ ತಿರುಗಿದ್ದು, ಈಗಾಗಲೇ 8 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.