Kornersite

Bollywood Entertainment Gossip Just In Mix Masala Sandalwood

Priyanka Chopra: ಪತಿಯ ಎದುರೇ ಬೇರೆ ನಟನಿಗೆ ಕಿಸ್ ಮಾಡಿದ ಪ್ರಿಯಾಂಕಾ!

ಇತ್ತೀಚೆಗೆ ದೇಶ- ವಿದೇಶಗಳಲ್ಲಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರದ್ದೇ ಸದ್ದು. ಬಾಲಿವುಡ್ ನಿಂದ ಹಾರಿ ಹಾಲಿವುಡ್ ನಲ್ಲಿ ಸದ್ಯ ಅವರು ಬ್ಯೂಸಿಯಾಗಿದ್ದಾರೆ. ಸದಾ ಸುದ್ದಿಯಲ್ಲಿರುವ ಪ್ರಿಯಾಂಕಾ, ಈಗ ಪತಿಯ ಎದುರು ಬೇರೆ ನಟಿನಿಗೆ ಕಿಸ್ ಮಾಡಿ ಸುದ್ದಿಯಾಗಿದ್ದಾರೆ.

‘ಲವ್ ಅಗೇನ್’ (Love Again) ಸಿನಿಮಾದ ಪ್ರಚಾರದಲ್ಲಿ ಇರುವ ಅವರು, ಪತಿ ನಿಕ್ ಜೋನಸ್ ಎದುರಲ್ಲಿಯೇ ಬೇರೆ ನಟನೊಂದಿಗೆ ಸಿಹಿ ಮುತ್ತು ಹಂಚಿಕೊಂಡಿದ್ದಾರೆ. ‘ಲವ್ ಅಗೇನ್’ ಸಿನಿಮಾದಲ್ಲಿ ಸ್ಯಾಮ್ ಹ್ಯೂವನ್ (Sam Heughan) ಮತ್ತು ಪ್ರಿಯಾಂಕಾ ಚೋಪ್ರಾ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್ ವೇಳೆ ಪ್ರಿಯಾಂಕಾ ಅವರ ಮೂಗಿಗೆ ಸ್ಯಾಮ್ ಹ್ಯೂವನ್ ಕಿಸ್ ಮಾಡಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.

ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್ ನಲ್ಲಿಯೇ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾದರೆ. ಹಿಂದಿ ಸಿನಿಮಾಗಳಿಂದ ಅವರು ಅಂತರ ಕಾಯ್ದುಕೊಂಡಿದ್ದಾರೆ. ಈಗ ‘ಲವ್ ಅಗೇನ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಪ್ರೀಮಿಯರ್ ಶೋ ಇತ್ತೀಚೆಗೆ ನಡೆಯಿತು. ನ್ಯೂಯಾರ್ಕ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಸ್ಯಾಮ್ ಹ್ಯೂವನ್ ಜೊತೆ ನಿಕ್ ಜೋನಸ್ ಕೂಡ ಭಾಗಿಯಾಗಿದ್ದರು. ಪ್ರಚಾರದ ಸಂದರ್ಭದಲ್ಲಿ ಕ್ಯಾಮೆರಾಗೆ ಪೋಸ್ ನೀಡುವಾಗ ಪ್ರಿಯಾಂಕಾ ಅವರ ಮೂಗಿನ ಮೇಲೆ ಸ್ಯಾಮ್ ಹ್ಯೂವನ್ ಅವರು ಕಿಸ್ ಮಾಡಿದ್ದಾರೆ.

ಮೇ 5ರಂದು ‘ಲವ್ ಅಗೇನ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ನಿಕ್ ಜೋನಸ್ ಕೂಡ ನಟಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ಸ್ಯಾಮ್ ಹ್ಯೂವನ್ ಅವರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ ಎಂಬುವುದಕ್ಕೆ ಟ್ರೇಲರ್ ನಿಂದ ತಿಳಿದು ಬರುತ್ತಿದೆ.

You may also like

Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,
Entertainment Politics

ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ! ಬೆಂಗಳೂರಿನಿಂದ ಸ್ಪರ್ಧೆ?

ಬೆಂಗಳೂರು : ಕೆಲವು ಸಮಯದವರೆಗೆ ಚಿತ್ರರಂಗ ಹಾಗೂ ರಾಜಕಾರಣದಿಂದ ದೂರ ಇದ್ದ ನಟಿ ರಮ್ಯ, ಈಗ ಎರಡೂ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಬ್ಯೂಸಿಯಾಗಿರುವ ಅವರು, ರಾಜಕೀಯದಲ್ಲಿಯೂ