ಐಟಿ ಅಧಿಕಾರಿಗಳು ಬೆಂಗಳೂರು ಹಾಗೂ ಮೈಸೂರು ಭಾಗದ ಫೈನಾನ್ಸಿಯರ್ ಗಳಿಗೆ ಶಾಕ್ ನೀಡಿದ್ದಾರೆ. ಈ ದಾಳಿಯಿಂದ ಸುಮಾರು 15 ಕೋಟಿಗೂ ಹೆಚ್ಚು ನಗದನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಇಷ್ಟೊಂದು ಹಣವನ್ನ ಫೈನಾನ್ಸಿಯರ್ ಗಳು ಚುನಾವಣೆಗೆ ಹಾಗೂ ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹಣ ಕೂಡಿಟ್ಟಿದ್ದರು ಎನ್ನಲಾಗಿದೆ.

ಇನ್ನು ಕೆಲವು ಫೈನಾನ್ಸಿಯರ್ ಗಳು ಬೇನಾಮಿಗಳಾಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಶಾಂತಿ ನಗರ, ಕಾಕ್ಸ್ ಟೌನ್, ಶಿವಾಜಿನಗರ, ಆರ್ ಎಂವಿ ಎಕ್ಸ್ ಟೆನ್ಶನ್, ಕನ್ನಿಂಗ್ ಹ್ಯಾಮ್ ರಸ್ತೆ, ಸದಾಶಿವ ನಗರ, ಕುಮಾರ ಪಾರ್ಕ್ ಸೇರಿದಂತೆ ಕೆಲವು ಕಡೆ ದಾಳಿ ನಡೆದಿದೆ.

ಐಟಿ ದಾಳಿಯಿಂದ 15 ಕೋಟಿ ನಗದು ಹಾಗೂ 5ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.