Hyderabad: ಹೊಸ ಕಾರ್ ತೆಗೆದುಕೊಂಡ ಮಹಿಳೆಯೊಬ್ಬಳು ಫುಲ್ ಖುಷಿಯಲ್ಲಿ ರಸ್ತೆಗೆ ಕಾರ್ ಇಳಿಸಿದ್ದಾಳೆ. ಆದ್ರೆ ಬ್ರೇಕ್ ಒತ್ತುವ ಬದಲಿಗೆ ಎಕ್ಸ್ ಲೇಟರ್ ಒತ್ತಿದ ಪರಿಣಾಮ ಫುಡ್ ಡೆಲಿವರಿ ಬಾಯ್ (Food Delivery boy)ಸಾವನ್ನಪ್ಪಿರುವ ಘಟನೆ ಹೈದರಾಬಾದ್ (Hyderabad) ನಲ್ಲಿ ನಡೆದಿದೆ.
ಸಾಫ್ಟ್ ವೇರ್ ಇಂಜಿನಿಯರ್ ಒಬ್ಬಳು ಹೊಸ ಕಾರ್ ಖರೀದಿಸಿದ್ದಾಳೆ. ಹೊಸ ಬಂದ ಖುಷಿಯಲ್ಲಿ ಯಡವಟ್ಟು ಮಾಡಿಕೊಂಡಿದ್ದಾಳೆ. ಇನ್ನು ಕಾರಿನ ನಂಬರ್ ನೋಂದಣಿಯಾಗಿಲ್ಲ. ಆದರೂ ಕಾರನ್ನ ರಸ್ತೆಗೆ ತೆಗೆದುಕೊಂಡು ಹೋಗಿದ್ದಾಳೆ. ರಸ್ತೆಗೆನೋ ತೆಗೆದುಕೊಂಡು ಹೋಗಿದ್ದಾಳೆ ಆದರೆ ಬ್ರೇಕ್ ಹಾಕುವ ಬದಲಿಗೆ ಎಕ್ಸ್ ಲೇಟರ್ ಒತ್ತಿ ಅಮಾಯಕನೊಬ್ಬನ ಜೀವವನ್ನೇ ಕಳೆದಿದ್ದಾಳೆ.
ಕಳೆದ ಬುಧವಾರ ರಾತ್ರಿ ಹೈದರಾಬಾದ್ ನ ಅಲ್ವಾಲ್ ನ ಡೈರಿ ಫಾರ್ಮ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಸಲಿಗೆ ಕೇವಲ ಡೆಲಿವರಿ ಬಾಯ್ ಅಷ್ಟೇ ಅಲ್ಲ ಎಕ್ಸ್ ಲೇಟರ್ ಒತ್ತಿದ ಪರಿಣಾಮಕ್ಕೆ ತಳ್ಳುವ ಗಾಡಿ ಸೇರಿದಂತೆ ಎರಡು ದ್ವಿಚಕ್ತ ವಾಹನಗಳಿಗೆ ಡಿಕ್ಕಿ ಹೊಡೆದು ಲೈಟ್ ಕಂಬಕ್ಕೆ ಹೋಗಿ ಕಾರು ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದಾಗ, ಕಾರಿನ ತಾತ್ಕಾಲಿಕ ನಂಬರ್ ನಿಂದ ಈ ಕಾರು ಶಿವಾನಿ ಎನ್ನುವ ಮಹಿಳೆಯದ್ದು ಎಂದು ಗುರುತಿಸಿದ್ದಾರೆ.
ಇನ್ನು ಈ ಘಟನೆಯಿಂದ ಸಾವನ್ನಪ್ಪಿದ ಫುಡ್ ಡೆಲಿವರಿ ಬಾಯ್ 30 ವರ್ಷದ ರಸ್ತಾಪುರಂ ರಾಜು ಎಂದು ಗುರುತಿಸಲಾಗಿದೆ. ರಸ್ತಾಪುರಂ ರಾಜು ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ. 5 ವರ್ಷದ ಮಗಳು ಹಾಗೂ 2 ವರ್ಷದ ಮಗ ಇದ್ದು, ಕುಟುಂಬಕ್ಕೆ ಈತನೇ ಆಧಾರ ಸ್ತಂಭ. ಫುಡ್ ಡೆಲಿವರಿ ಕೆಲಸದಿಂದ ಬರುವ ಅಲ್ಪ ಸ್ವಲ್ಪ ಹಣದಿಂದಲೇ ಸಂಸಾರ ನಡೆಸುತ್ತಿದ್ದ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.