Hassan : ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಪತಿಯ ಸಾವಿನ ಸುದ್ದಿ ಕೇಳಿ ಅಳುತ್ತ ಪತ್ನಿ ಪ್ರಾಣ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಪತಿ ಸಾವಿನಿಂದ ಮನನೊಂದಿದ್ದ ಪತ್ನಿ, ಅಳುತ್ತಲೆ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ.
39 ವರ್ಷದ ರವೀಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಪತಿಯ ಸಾವಿನ ದುಃಖ ತಡೆದುಕೊಳ್ಳಲಾರದ 32 ವರ್ಷದ ಪತ್ನಿ ಪ್ರಮೀಳಾ ಬೆಳಿಗ್ಗೆಯಿಂದಲೂ ಜೋರಾಗಿ ಅಳುತ್ತಿದ್ದರು. ಹೀಗೆ ಅಳುತ್ತಲೇ ಪ್ರಾಣ ಬಿಟ್ಟಿದ್ದರು. ಪತಿ ಹಾಗೂ ಪತ್ನಿಯ ಸಾವಿನಿಂದಾಗಿ ಇಬ್ಬರು ಗಂಡು ಮಕ್ಕಳು ಅನಾಥರಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.