Bangalore: ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 200 ರೂ.ನಷ್ಟು ಏರಿಕೆ ಕಂಡಿದೆ. ಈ ಮೂಲಕ 3 ದಿನಗಳಲ್ಲಿ ಬರೋಬ್ಬರಿ ಒಂದೂವರೆ ಸಾವಿರದಷ್ಟು ಚಿನ್ನದ ದರ ಹೆಚ್ಚಾಗಿದೆ.
ಭಾರತ ದೇಶ ಅಷ್ಟೇ ಅಲ್ಲದೇ, ಎಲ್ಲ ದೇಶಗಳಲ್ಲಿಯೂ ಚಿನ್ನದ ಬೆಲೆ ಹೆಚ್ಚಳವಾಗಿದೆ. ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 57,200 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 62,400 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,825 ರೂ. ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 57,250 ರೂ. ಆಗಿದೆ. ಬೆಳ್ಳಿಯ ಬೆಲೆಯಲ್ಲಿ 100 ಗ್ರಾಂಗೆ 8,370 ರೂ. ಆಗಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 6ಕ್ಕೆ):
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 57,200 ರೂ
24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 62,400 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 782.50 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ):
ಮಲೇಷ್ಯಾ: 2,900 ರಿಂಗಿಟ್ (53,409 ರೂ)
ದುಬೈ: 2287.5 ಡಿರಾಮ್ (50,902 ರೂ)
ಅಮೆರಿಕ: 630 ಡಾಲರ್ (51,479 ರೂ)
ಸಿಂಗಾಪುರ: 845 ಸಿಂಗಾಪುರ್ ಡಾಲರ್ (52,127 ರೂ)
ಕತಾರ್: 2,370 ಕತಾರಿ ರಿಯಾಲ್ (53,198 ರೂ)
ಓಮನ್: 250 ಒಮಾನಿ ರಿಯಾಲ್ (53,065 ರೂ)
ಕುವೇತ್: 195.50 ಕುವೇತಿ ದಿನಾರ್ (52,164 ರೂ)