ಟೈಟಾನ್ಸ್ (Rajasthan Royals) ತಂಡವು ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಬಹುತೇಕವಾಗಿ ಪ್ಲೇ ಆಫ್ ಪ್ರವೇಶಿಸಿದಂತಾಗಿದೆ.
ಗುಜರಾತ್ ಟೈಟಾನ್ಸ್ ತಂಡವು ತಾನಾಡಿದ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸುವ ಮೂಲಕ ಎಂಟ್ರಿ ಕೊಟ್ಟಿದೆ. 10 ರಲ್ಲಿ 7 ಪಂದ್ಯಗಳಲ್ಲಿ ಜಯ ಸಾಧಿಸಿರುವ ಗುಜರಾತ್ 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಲಾ 11 ಅಂಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 17.5 ಓವರ್ ಗಳಲ್ಲಿಯೇ 118 ರನ್ ಗಳಿಸಿ ಸಂಪೂರ್ಣ ಆಲ್ ಔಟ್ ಆಯಿತು. 119 ರನ್ ಗಳ ಗುಜರಾತ್ 13.5 ಓವರ್‌ಗಳಲ್ಲೇ ಒಂದೇ ವಿಕೆಟ್ ನಷ್ಟಕ್ಕೆ 119 ರನ್ ಸಿಡಿಸಿ ಗೆಲುವು ಸಾಧಿಸಿತು.
ಗುಜರಾತ್ ಟೈಟಾನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ವೃದ್ದಿಮಾನ್ ಸಾಹಾ ಶುಭಮನ್ ಗಿಲ್ (Shubman Gill) ಉತ್ತಮ ಶುಭಾರಂಭ ಪಡೆದರು. ಈ ಜೋಡಿ 9.4 ಓವರ್ ಗಳಲ್ಲಿ 71 ರನ್ ಗಳಿಸಿತ್ತು. ಶುಭಮನ್ ಗಿಲ್ ಔಟಾಗುತ್ತಿದ್ದಂತೆ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಟೈಟಾನ್ಸ್ ಪರ ವೃದ್ಧಿಮಾನ್ ಸಾಹಾ (Wriddhiman Saha) 40 ರನ್, ಶುಭಮನ್ ಗಿಲ್ 36 ರನ್, ಹಾರ್ದಿಕ್ ಪಾಂಡ್ಯ 39 ರನ್ ಗಳಿಸಿದರು. ರಾಜಸ್ಥಾನ್ ಪರ ಯಜುವೇಂದ್ರ ಚಾಹಲ್ ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡ 118 ರನ್ ಗಳಿಸಿ ಆಲ್ಔಟ್ ಆಯಿತು. ಆರಂಭಿಕರಾಗಿ ಕಣಕ್ಕೆ ಇಳಿದ ಜೋಸ್ ಬಟ್ಲರ್ 8 ರನ್ ಗಳಿಸಿ ನಿರ್ಗಮಿಸಿದರೆ, ಯಶಸ್ವಿ ಜೈಸ್ವಾಲ್ 14 ರನ್ ಗಳಿಸಿ ಔಟ್ ಆದರು. ಸಂಜು ಸ್ಯಾಮ್ಸನ್ (Sanju Samson) 30 ರನ್, ದೇವದತ್ ಪಡಿಕ್ಕಲ್ 12 ರನ್, ರವಿಚಂದ್ರನ್ ಅಶ್ವಿನ್ 2 ರನ್, ರಿಯಾನ್ ಪರಾಗ್ 4 ರನ್, ಶಿಮ್ರಾನ್ ಹೆಟ್ಮೇಯರ್ 7 ರನ್, ಧ್ರುವ್ ಜುರೆಲ್ 9 ರನ್, ಟ್ರೆಂಟ್ ಬೌಲ್ಟ್ 15 ರನ್, ಆಡಂ ಜಂಪಾ 7 ರನ್ ಹಾಗೂ ಸಂದೀಪ್ ಶರ್ಮಾ ಅಜೇಯ 2 ರನ್ ಗಳಿಸಿದರು. ರಶೀದ್ ಖಾನ್ (Rashid Khan) 3 ವಿಕೆಟ್ ಪಡೆದರೆ, ನೂರ್ ಅಹ್ಮದ್ 2, ಜೋಶ್ವಾ ಲಿಟಲ್, ಮೊಹಮ್ಮದ್ ಶಮಿ, ನಾಯಕ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಕಿತ್ತರು.