Bagalkote : ಕಾಂಗ್ರೆಸ್ ಸರ್ಕಾರ (Congress Government)ವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 1 ಜಿಬಿ ಡೇಟಾಗೆ 300 ರೂ. ಖರ್ಚಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ (BJP Government) ಅಧಿಕಾರಕ್ಕೆ ಬಂದ ನಂತರ 1 ಜಿಬಿ ಡೇಟಾಗೆ (Mobile Internet) ಕೇವಲ 10 ರೂ. ಖರ್ಚಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.
ಬಾಗಲಕೋಟೆಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಇಂದು ಪ್ರತಿ ತಿಂಗಳ ಡೇಟಾ 4 ರಿಂದ 5 ಸಾವಿರ ರೂ. ಆಗ್ತಿತ್ತು. ಬಿಜೆಪಿ ಸರ್ಕಾರಕ್ಕೆ ಬಂದು ಎಷ್ಟು ಉಳಿತಾಯ ಆಗುತ್ತಿದೆ. ಹಿಂದೆ ಮೊಬೈಲ್ಗಳು ವಿದೇಶಗಳಿಂದ ಬರುತ್ತಿದ್ದವು. ಸದ್ಯ ಭಾರತದಿಂದಲೇ ಮೊಬೈಲ್ ರಫ್ತಾಗುತ್ತಿವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಹಿರಂಗವಾಗಿಯೇ ಬಡವರ ಕಲ್ಯಾಣಕ್ಕಾಗಿ 100 ಪೈಸೆ ದೆಹಲಿಯಿಂದ ಬಿಡುಗಡೆಯಾದರೆ, 50 ಪೈಸೆ ಬಡವರ ಕೈಗೆ ಸೇರುತ್ತಿವೆ ಎಂದು ಹೇಳಿದ್ದರು. ಅಂದರೆ 50 ಪೈಸೆ ಲೂಟಿ ಆಗುತ್ತಿತ್ತು. ಆದರೆ, ಬಿಜೆಪಿ ಬಂದ ಮೇಲೆ ಇದಕ್ಕೆಲ್ಲ ಕಡಿವಾಣ ಹಾಕಿದೆ ಎಂದು ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ 29 ಲಕ್ಷ ಕೋಟಿ ರೂ. ಹಣವನ್ನು ಬಡವರ ಅಕೌಂಟ್ ಗೆ ಹಾಕಿದೆ. `ಆಯುಷ್ಮಾನ್ ಭಾರತ್’ ಯೋಜನೆಯಿಂದ 80 ಸಾವಿರ ಕೋಟಿ ಜನರ ಹಣ ಉಳಿಕೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ 24 ಸಾವಿರ ಕೋಟಿ ಲೂಟಿ ಆಗ್ತಿತ್ತು. ನಾವು ಉಳಿತಾಯ ಮಾಡಿದ್ದರಿಂದ ನನಗೆ ಬೈಯುತ್ತಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ (Siddaramaiah) ಅವರು ಸಿಎಂ ಆಗಿದ್ದಾಗ ಇಲ್ಲಿ ಅಭಿವೃದ್ಧಿ ಆಗಿಲ್ಲ. ಅವರು ಶಾಸಕರಾಗಿ ಉಳಿದಾಗ, ಬಿಜೆಪಿಯ ಡಬಲ್ ಇಂಜೀನ್ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು. ರಸ್ತೆಗಳಲ್ಲಿ ದೀಪಗಳನ್ನು ಅಳವಡಿಸಿದ್ದು, ಬಿಜೆಪಿ ಸರ್ಕಾರ. ಹೀಗಾಗಿಯೇ ಸಿದ್ದರಾಮಯ್ಯ ಈ ಜಿಲ್ಲೆಯಿಂದ ಬಿಟ್ಟು ಓಡಿ ಹೋಗಿದ್ದಾರೆ ಎಂದು ಹೇಳಿದ್ದಾರೆ.