Kornersite

Crime Just In National

Hospital: ಮಧ್ಯಪ್ರದೇಶದಲ್ಲಿ ಮನಕಲಕುವ ಘಟನೆ; ಆಸ್ಪತ್ರೆ ಮೆಟ್ಟಿಲ ಮೇಲೆಯೇ ಹೆರಿಗೆ!

ವೈದ್ಯರು ಹಾಗೂ ನರ್ಸ್ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಆಸ್ಪತ್ರೆಯ ಮೆಟ್ಟಿಲು ಮೇಲೆಯೇ ಹೆರಿಗೆಯಾಗಿರುವ ಮನ ಕಲಕುವ ಘಟನೆ ಮಧ್ಯಪ್ರದೇಶ(Madhya Pradesh)ದಲ್ಲಿ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಶಿವಪುರಿಯಲ್ಲಿರುವ ಆಸ್ಪತ್ರೆಯ ಹೊರಗೆ ಈ ಘಟನೆ ನಡೆದಿದೆ. ಅರುಣ್ ಪರಿಹಾರ್ ಎಂಬ ವ್ಯಕ್ತಿಯ ಪತ್ನಿಗೆ ಬೆಳಿಗ್ಗೆಯಿಂದ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆ ವ್ಯಕ್ತಿ ಜನನಿ ಎಕ್ಸ್‌ ಪ್ರೆಸ್‌ ಗೆ ಕರೆ ಮಾಡಿದ್ದಾನೆ. ಆದರೆ, ಅದು ಕೂಡ ತಡವಾಗಿ ಬಂದಿದೆ. ಇನ್ನೇನು ಆಸ್ಪತ್ರೆಗಾದರೂ ಬೇಗ ಸಾಗಿಸಿ ಹೆರಿಗೆ ಮಾಡಿಸಿಕೊಳ್ಳಬೇಕು ಎಂದರೆ, ಆಸ್ಪತ್ರೆಯಲ್ಲಿಯೂ ಸಹ, ಸ್ಟ್ರೆಚರ್ ಅಥವಾ ವಾರ್ಡ್ ಬಾಯ್ ಇವರ ಬಳಿ ಬಂದೇ ಇಲ್ಲ. ಹೀಗಾಗಿ ಆಸ್ಪತ್ರೆಯ ಮೆಟ್ಟಿಲು ಮೇಲೆಯೇ ನನ್ನ ಹೆಂಡತಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂದು ಪರಿಹಾರ್ ಮಾಹಿತಿ ನೀಡಿದ್ದಾರೆ.

ಹೆರಿಗೆ ನೋವಿನಿಂದ ಮಹಿಳೆ ಒದ್ದಾಡುತ್ತಿರುವುದನ್ನು ಕಂಡು ಜನ ಸೇರುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿಗೆ ಮನವಿ ಮಾಡಿದಾಗ ಸಿಬ್ಬಂದಿಯು ಆಸ್ಪತ್ರೆಯ ಸ್ಟ್ರೆಚರ್ನಲ್ಲಿ ಮಹಿಳೆ ಹಾಗೂ ಮಗುವನ್ನು ಆಸ್ಪತ್ರೆಯೊಳಗೆ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಆಸ್ಪತ್ರೆಯ ನಿರ್ಲಕ್ಷ್ಯದ ಕರಿತು ದೂರು ನೀಡಿರುವ ವ್ಯಕ್ತಿ, ನವಜಾತ ಶಿಶು ಮತ್ತು ಪತ್ನಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ