Bangaolre : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲ ಪಕ್ಷಗಳ ರಾಷ್ಟ್ರೀಯ ನಾಯಕರು ಪ್ರಚಾರ ಕಾರ್ಯ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಾಲಿನಲ್ಲಿ ಪ್ರಥಮರಾಗಿ ನಿಂತಿದ್ದಾರೆ. ಮೋದಿ ಅವರು ರಾಜ್ಯದಲ್ಲಿ ಕಳೆದ 9 ದಿನಗಳಲ್ಲಿ 18 ಬೃಹತ್ ಸಮಾವೇಶ ಹಾಗೂ 6 ರೋಡ್ ಶೋಗಳ ಮೂಲಕ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಮೋದಿ (Prime minister Narendra Modi tour in Karnataka) ಅವರೊಂದಿಗೆ, ಕೇಂದ್ರ ಸಚಿವ ಅಮಿತ್ ಶಾ (Amit Shah), ಸ್ಮೃತಿ ಇರಾನಿ (Smriti Irani), ರಾಜನಾಥ್ ಸಿಂಗ್ (Rajanath Sigh), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (UP CM Yogi adityanath), ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಸೇರಿದಂತೆ ಹಲವು ಬಿಜೆಪಿ ನಾಯಕರು ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಕಳೆದ ಏ.29ರಿಂದ ಮೇ 7ರ ವರೆಗೆ ಮತ ಶಿಖಾರಿ ನಡೆಸಿದ್ದಾರೆ. 9 ದಿನಗಳಲ್ಲಿ 18 ಸಮಾವೇಶ (18 Convention) 6 ರೋಡ್ ಶೋಗಳನ್ನು (6 Road Show) ನಡೆಸಿದ್ದಾರೆ. ಮೊದಲ ಹುಮ್ನಾಬಾದ್ನಲ್ಲಿ (Humnabad) ರ್ಯಾಲಿ ಮೂಲಕ ಅವರ ಮತಬೇಟೆ ಕಾರ್ಯ ಆರಂಭವಾಗಿ ನಂಜನಗೂಡಿನಲ್ಲಿ (Nanjanagudu) ಬಹಿರಂಗ ಪ್ರಚಾರದಲ್ಲಿ ಅಂತ್ಯವಾಯಿತು. ಒಟ್ಟಾರೆ ರಾಜ್ಯದಲ್ಲಿ ಈ ಬಾರಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮತಬೇಟೆ ನಡೆಸಿದ್ದಾರೆ. ಆದರೆ, ಮತದಾರ ಯಾರಿಗೆ ಒಲಿಯುತ್ತಾನೆ ಎಂಬುವುದನ್ನು ಕಾಯ್ದು ನೋಡಬೇಕಿದೆ.