Kornersite

Just In Sports

IPL 2023: ಜಯದ ನಗೆ ಬೀರಿದ ಸನ್ ರೈಸರ್ಸ್; ಮುಗ್ಗರಿಸಿದ ರಾಜಸ್ಥಾನ್!

Jaipur : ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡ ವಿರೋಚಿತ ಸೋಲನುಭವಿಸಿತು. ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಹೈದರಾಬಾದ್ ತಂಡಕ್ಕೆ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 19 ರನ್‌ ಗಳ ಅವಶ್ಯವಿತ್ತು. ಸಂದೀಪ್‌ ಶರ್ಮಾ ಬೌಲಿಂಗ್ ಮಾಡುತ್ತಿದ್ದರು. ಕ್ರಮವಾಗಿ 2,6,2,1,1 ಸಿಡಿಸಿದ್ದರು. ಆದರೆ, ಕೊನೆಯ ಎಸೆತದಲ್ಲಿ 5 ರನ್ ಬೇಕಾಗಿತ್ತು. ಅಬ್ದುಲ್ ಸಮದ್ (Abdul Samad) ಸಿಕ್ಸ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿದರು. ರಾಜಸ್ಥಾನ ತಂಡ ಗೆದ್ದಾಯಿತು ಎಂದು ಸಂಭ್ರಮಿಸುತ್ತಿದ್ದಂತೆ 3ನೇ ಅಂಪೈರ್‌ನಿಂದ ನೋಬಾಲ್‌ ಫಲಿತಾಂಶ ಹೊರಬಂದಿತು. ಮರು ಎಸೆತದಲ್ಲಿಯೇ ಸಮದ್‌ ಭರ್ಜರಿ ಸಿಕ್ಸರ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ತಂಡವು ನಿಗದಿತ 20 ಓವರ್‌ ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 214 ರನ್‌ ಸಿಡಿಸಿತ್ತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್‌ 20 ಓವರ್‌ ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 217 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಬೃಹತ್ ಗುರಿ ಬೆನ್ನಟ್ಟಿದ ಹೈದರಾಬಾದ್‌ ತಂಡವು, ಮೊದಲ ವಿಕೆಟ್‌ ಗ 5 ಓವರ್‌ ಗಳಲ್ಲಿ 51 ರನ್‌ ಗಳಿಸಿದ್ದ ಹೈದರಾಬಾದ್‌ 2ನೇ ವಿಕೆಟ್‌ಗೆ 12.4 ಓವರ್‌ಗಳಲ್ಲಿ 116 ರನ್‌ ಕಲೆಹಾಕಿತ್ತು. 2ನೇ ವಿಕೆಟ್‌ ನಲ್ಲಿ ರಾಹುಲ್‌ ತ್ರಿಪಾಠಿ (Rahul Tripathi) ಹಾಗೂ ಅಭಿಷೇಕ್‌ ಶರ್ಮಾ (Abhishek Sharma) ಭರ್ಜರಿ ಬ್ಯಾಟಿಂಗ್‌ನಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. 18 ಎಸೆತಗಳಲ್ಲಿ 44 ರನ್‌ ಬೇಕಿರುವಾಗಲೇ ಯಜುವೇಂದ್ರ ಚಾಹಲ್‌ ಬೌಲಿಂಗ್‌ನಲ್ಲಿ ರಾಹುಲ್‌ ತ್ರಿಪಾಠಿ ಔಟ್ ಆದರು. ಕಣಕ್ಕೆ ಇಳಿದ ಗ್ಲೇನ್‌ ಫಿಲಿಪ್ಸ್‌ (Glenn Phillips) 7 ಎಸೆತಗಳಲ್ಲಿ ಸ್ಫೋಟಕ 25 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದರು. ಕೊನೆಯ ಓವರ್‌ನಲ್ಲಿ ಪಂದ್ಯ ರೋಚಕ ತಿರುವು ಪಡೆದಿತ್ತು. ರಾಜಸ್ಥಾನ್‌ಗೆ ಗೆಲ್ಲುವ ಅವಕಾಶವಿದ್ದರೂ ಬೌಲರ್‌ ಸಂದೀಪ್‌ ಶರ್ಮಾ ಮಾಡಿದ ಬೌಲಿಂಗ್‌ ಎಡವಟ್ಟಿನಿಂದ ವಿರೋಚಿತ ಸೋಲನುಭವಿಸಿತು.

ಹೈದರಾಬಾದ್‌ ಪರ ಅನ್ಮೋಲ್ಪ್ರೀತ್ ಸಿಂಗ್ 33 ರನ್‌, ಅಭಿಷೇಕ್‌ ಶರ್ಮಾ 55 ರನ್‌, ರಾಹುಲ್‌ ತ್ರಿಪಾಠಿ 47 ರನ್‌, ಹೆನ್ರಿಚ್‌ ಕಳಸೇನ್‌ 26 ರನ್‌, ಫಿಲಿಪ್ಸ್‌ 25 ರನ್‌, ಅಬ್ದುಲ್‌ ಸಮದ್‌ 7 ಎಸೆತಗಳಲ್ಲಿ 17 ರನ್‌ ಚಚ್ಚಿ ಗೆಲುವಿಗೆ ಕಾರಣರಾದರು. ರಾಜಸ್ಥಾನ್‌ ಪರ ಯಜುವೇಂದ್ರ ಚಾಹಲ್‌ 4, ಕುಲ್‌ದೀಪ್‌ ಯಾದವ್‌, ರವಿಚಂದ್ರನ್‌ ಅಶ್ವಿನ್‌ ತಲಾ ಒಂದು ವಿಕೆಟ್ ಪಡೆದರು.

ರಾಜಸ್ಥಾನ್‌ ತಂಡವು ಮೊದಲು ಬ್ಯಾಟಿಂಗ್ ಮಾಡಿ ಭರ್ಜರಿ ಪ್ರದರ್ಶನ ನೀಡಿತ್ತು. ಯಶಸ್ವಿ ಜೈಸ್ವಾಲ್‌, ಜೋಸ್‌ ಬಟ್ಲರ್‌, ನಾಯಕ ಸಂಜು ಸ್ಯಾಮ್ಸನ್‌ ಅವರ ಸಿಕ್ಸರ್‌ ಬೌಂಡರಿ ಬ್ಯಾಟಿಂಗ್‌ನಿಂದ ತಂಡ 200 ರನ್‌ಗಳ ಗಡಿ ದಾಟಿತ್ತು. ರಾಜಸ್ಥಾನ್‌ ಪರ ಯಶಸ್ವಿ ಜೈಸ್ವಾಲ್‌ 35 ರನ್‌, ಜೋಸ್‌ ಬಟ್ಲರ್‌ (Jos Buttler) 95 ರನ್‌, ಸಂಜು ಸ್ಯಾಮ್ಸನ್‌ (Sanju Samson) 66 ರನ್‌, ಶಿಮ್ರಾನ್‌ ಹೆಟ್ಮೇಯರ್‌ 7 ರನ್‌ ಗಳಿಸಿದರು. ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌ ಹಾಗೂ ಮಾರ್ಕೋ ಜಾನ್ಸೆನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್