Islamabad : ಪಾಕ್ ಗೆ ಸಂಬಂಧಿಸಿದ ಜಲಗಡಿಯೊಳಗೆ ಮೀನುಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದ 199 ಜನ ಭಾರತೀಯರನ್ನು (Indian Fishermen) ಶುಕ್ರವಾರ ಪಾಕಿಸ್ತಾನದ ಅಧಿಕಾರಿಗಳು ಬಿಡುಗಡೆ ಮಾಡಲಿದ್ದಾರೆ.
199 ಮೀನುಗಾರರ ಬಿಡುಗಡೆ ಮಾಡಿ ಭಾರತಕ್ಕೆ (India) ವಾಪಸ್ ಕಳುಹಿಸಿ ಎಂದು ಸರ್ಕಾರಿ ಸಚಿವಾಲಯ ಹೇಳಿದೆ ಎಂದು ಸಿಂಧ್‌ನ ಜೈಲು ಮತ್ತು ತಿದ್ದುಪಡಿ ವಿಭಾಗದ ಉನ್ನತ ಪೊಲೀಸ್ ಅಧಿಕಾರಿ ಕಾಜಿ ನಜೀರ್ ಹೇಳಿದ್ದಾರೆ. ಈ ಮೀನುಗಾರರನ್ನು ಲಾಹೋರ್ ಗೆ ಕಳುಹಿಸಿ, ಅಲ್ಲಿಂದ ವಾಘಾ ಗಡಿ ಮೂಲಕ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಸದ್ಯ ಈ ಬಂಧಿತ ಮೀನುಗಾರರು ಲಾಂಧಿ ಜೈಲಿನಲ್ಲಿ ಇದ್ದಾರೆ.
ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.ಭಾರತೀಯ ನಾಗರಿಕ ಖೈದಿ ಜುಲ್ಫಿಕರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಕರಾಚಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ಸಹ ಮೀನುಗಾರರೊಂದಿಗೆ ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ. ಭಾರತೀಯ ಖೈದಿ ತೀವ್ರ ಜ್ವರ ಮತ್ತು ಎದೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವರು ಶ್ವಾಸಕೋಶದ ಸೋಂಕಿನಿಂದ ನಿಧನರಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದರು.
654 ಭಾರತೀಯ ಮೀನುಗಾರರು ಕರಾಚಿ ಜೈಲುಗಳಲ್ಲಿದ್ದಾರೆ. ಅಲ್ಲದೇ, ಅಂದಾಜು 83 ಪಾಕಿಸ್ತಾನಿ ಮೀನುಗಾರರು ಭಾರತೀಯ ಜೈಲುಗಳಲ್ಲಿದ್ದಾರೆ. 654 ಭಾರತೀಯ ಮೀನುಗಾರರ ಪೈಕಿ 631 ಜನ ತಮ್ಮ ಶಿಕ್ಷೆ ಪೂರ್ಣಗೊಳಿಸಿದ್ದಾರೆ.