Dharwad : ಅಭಿಮಾನಿಯೊಬ್ಬರು ನೀಡಿದ್ದ ಪಾದರಕ್ಷೆಯನ್ನು ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ್ ಬೆಲ್ಲದ್ ಅವರು ಕಣ್ಣಿಗೆ ಒತ್ತಿಕೊಂಡು ತಮ್ಮ ತಲೆಯ ಮೇಲೆ ಇಟ್ಟುಕೊಂಡಿದ್ದಾರೆ.
ಬೆಲ್ಲದ್ ನಿವಾಸದಲ್ಲಿ ಸಮ್ಗರ್ (ಚಮ್ಮಾರ) ಸಮುದಾಯದ ನಿಯೋಗವು ಉಡುಗೊರೆಯಾಗಿ ನೀಡಿದ ಪಾದರಕ್ಷೆಯನ್ನು ಕಣ್ಣಿಗೆ ಒತ್ತಿಕೊಂಡು ತಲೆ ಮೇಲೆ ಇಟ್ಟುಕೊಂಡಿದ್ದಾರೆ. ಬೆಲ್ಲದ್ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಲಯಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅವರನ್ನು ಹೊಗಳಿದರೆ ಇನ್ನು ಕೆಲವರು ಇದೊಂದು ರಾಜಕೀಯ ಗಿಮಿಕ್ ಎಂದಿದ್ದಾರೆ.
ಉಡುಗೊರೆಯನ್ನು ಗೌರವಿಸಬೇಕು ಆದರೆ ಅದನ್ನು ಮುಚ್ಚಿದ ಬಾಗಿಲುಗಳಲ್ಲಿ ಮಾಡಬಹುದಿತ್ತು. ಅವರು ಮತದಾರರನ್ನು ಆಕರ್ಷಿಸಲು ಮಾಡಿರುವ ಗಿಮಿಕ್ ಆಗಿದೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಪ್ರಚಾರಕ್ಕಾಗಿ ಇಂತಹ ಕಾರ್ಯಗಳ ಅವಶ್ಯಕತೆ ಇಲ್ಲ ಎಂದ ಹಲವರು ಹೇಳಿದ್ದಾರೆ.
ನಾನು ರಾಜಕೀಯವಾಗಿ, ಆರ್ಥಿಕವಾಗಿ, ಕೌಶಲ್ಯ ಅಭಿವೃದ್ಧಿ ಕೋರ್ಸ್ಗಳು ಮತ್ತು ಅವರಿಗಾಗಿ ಆಡಿಟೋರಿಯಂಗಳನ್ನು ನಿರ್ಮಿಸುವುದು ಸೇರಿದಂತೆ ಅನೇಕ ರೀತಿಯಲ್ಲಿ ಸಮುದಾಯಕ್ಕೆ ಸಹಾಯ ಮಾಡಿದ್ದೇನೆ. ಇದರಿಂದಾಗಿ ನಾನು ಮಾಡಿದ ಎಲ್ಲಾ ಕೆಲಸಕ್ಕೂ ಧನ್ಯವಾದ ಹೇಳಿದರು.