ರಾಜ್ಯದಲ್ಲಿ ಭಜರಂಗಿ ವಿಷಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ದೊಡ್ಡ ಫೈಟ್ ನಡೆಯಿತು. ಕಾಂಗ್ರೆಸ್ ಪ್ರಣಾಳಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಲಾಭ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಇದೇ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಮುಖಭಂಗ ಉಂಟು ಮಾಡಲು ಯತ್ನಿಸಿದರು.
ಆದರೆ, ಇಂದು ಡಿ.ಕೆ. ಶಿವಕುಮಾರ್ ಗೆ ಭಜರಂಗಿಯೇ ಪ್ರಸಾದ ಕರುಣಿಸಿದ್ದಾನೆ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಿಗ್ಗೆ ಮೈಸೂರು ಸರ್ಕಲ್ ನಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಭಜರಂಗಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿರು. ಪೂಜೆಯ ನಂತರ ಡಿಕೆಶಿಗೆ ಆಂಜನೇಯನು ಬಲಗಡೆಯಿಂದ ಹೂವು ಕರುಣಿಸಿದ್ದಾನೆ.