Kornersite

Just In Politics State

ಮತದಾರರಿಗೆ ಉಚಿತ ಆಹಾರ ವಿತರಣೆ ಹೇಳಿಕೆಗೆ ಗರಂ

ಇತ್ತೀಚೆಗಷ್ಟೇ ಮತದಾರರು ಮತ ಚಲಾಯಿಸಿದರೆ, ತಿಂಡಿ ಉಚಿತ ಹಾಗೂ ಮೊದಲ ಬಾರಿಗೆ ಮತ ಹಾಕುತ್ತಿರುವವರು ತಮ್ಮ ಹಕ್ಕು ಚಲಾಯಿಸಿದರೆ ಉಚಿತ ಸಿನಿಮಾ ಟಿಕೆಟ್ ನೀಡಲಾಗುವುದು ಎಂದು ವಿಧ ವಿಧದ ಆಫರ್ ಗಳನ್ನು ಹೋಟೆಲ್ ಮಾಲೀಕರು ನೀಡಿದ್ದರು. ಸದ್ಯ ಈ ಹೋಟೆಲ್ ಮಾಲೀಕರಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ.

ಉಚಿತ ಆಹಾರ ನೀಡುತ್ತೇನೆ ಎಂದು ಘೋಷಿಸಿರುವ ಹೋಟೆಲ್‌ಗಳ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಇದು ಪ್ರಚೋದನೆಗಳು ಮತ್ತು ಚುನಾವಣೆ ನೀತಿ ಉಲ್ಲಂಘನೆ ಯಾಗುತ್ತದೆ ಎಂದು ಬಿಬಿಎಂಪಿ ಅಭಿಪ್ರಾಯಪಟ್ಟಿದೆ. ಉಚಿತ ಆಹಾರ ನೀಡುತ್ತಿರುವ ಹೊಟೇಲ್ ಆಡಳಿತ ಮಂಡಳಿಗಳ ವಿರುದ್ಧವೂ ಪ್ರಕರಣ ದಾಖಲಿಸುವುದಾಗಿ ನಾಗರಿಕ ಮಂಡಳಿ ಎಚ್ಚರಿಕೆ ನೀಡಿದೆ.

ಮತ ಚಲಾಯಿಸುವಂತೆ ಉತ್ತೇಜಿಸಲು ಬೆಂಗಳೂರಿನ ಎರಡು ಹೋಟೆಲ್‌ಗಳು ಉಚಿತ ಆಹಾರ ಘೋಷಣೆಗಳನ್ನು ಮಾಡಿದ್ದವು. ನಿಸರ್ಗ ಗ್ರ್ಯಾಂಡ್ ಹೋಟೆಲ್ ಬೆಣ್ಣೆ ಖಾಲಿ ದೋಸೆ, ಮೈಸೂರು ಪಾಕ್ ಮತ್ತು ಜ್ಯೂಸ್ ನೀಡುವುದಾಗಿ ಘೋಷಿಸಿತ್ತು. ಚಾಲುಕ್ಯ ಸಾಮ್ರಾಟ್ ಹೋಟೆಲ್ ಮತದಾನದ ನಂತರ ರೆಸ್ಟೋರೆಂಟ್‌ಗೆ ಭೇಟಿ ನೀಡಿದರೆ, ಉಚಿತ ಉಪಹಾರ ನೀಡುವುದಾಗಿ ಹೇಳಿತ್ತು. ಸದ್ಯ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಹೋಟೆಲ್ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಹೇಳಿದೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು