Kornersite

International Just In Uncategorized

Imran Khan: ನಾನು ಯಾವುದೇ ತಪ್ಪು ಮಾಡದಿದ್ದರೂ ಜೈಲಿಗೆ ಹಾಕುವ ಸಂಚು; ಇಮ್ರಾನ್ ಖಾನ್!

ಇಸ್ಲಾಮಾಬಾದ್ : ನನ್ನ ಮೇಲೆ ಯಾವುದೇ ಕೇಸ್ ಇಲ್ಲದಿದ್ದರೂ ನನ್ನನ್ನು ಜೈಲಿಗೆ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ರೇಂಜರ್‌ಗಳು ಮಂಗಳವಾರ ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಬಂಧಿಸಿದ್ದಾರೆ. ಅಲ್ ಖಾದಿರ್ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಇಮ್ರಾನ್ ಖಾನ್ ಅವರನ್ನು ಬಂಧಿಸುವ ಸಂದರ್ಭದಲ್ಲಿ ಪಾಕಿಸ್ತಾನಿ ರೇಂಜರ್‌ಗಳು ತಳ್ಳಿದ್ದಾರೆ. ಇದರಿಂದಾಗಿ ಅವರು ಗಾಯಗೊಂಡಿದ್ದಾರೆಂದು ಹಲವು ವಿಡಿಯೊ ಮತ್ತು ಫೋಟೋಗಳನ್ನು ಪಕ್ಷ ಬಿಡುಗಡೆ ಮಾಡಿದೆ.

ಇಮ್ರಾನ್ ಖಾನ್ ಅವರ ನಾಟಕೀಯ ಬಂಧನದ ಹಲವಾರು ಫೋಟೋ-ವಿಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅಲ್ಲದೇ, ಪ್ರತಿಭಟನೆಗೆ ಮುಂದಾಗಿ ಎಂದು ಅವರ ಪಕ್ಷದವರು ಕರೆ ನೀಡಿದ್ದಾರೆ. ಬಂಧನಕ್ಕೂ ಮುನ್ನ ಇಮ್ರಾನ್ ಖಾನ್ ವೀಡಿಯೊ ಸಂದೇಶದಲ್ಲಿ, ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ, ಆದರೂ ಅವರು ನನ್ನನ್ನು ಜೈಲಿಗೆ ಹಾಕಲು ಬಯಸುತ್ತಾರೆ, ನಾನು ಹೋರಾಟಕ್ಕೆ ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

You may also like

International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ