ಇಂದು ಮುಂಬಯಿ ಇಂಡಿಯನ್ಸ್ (Mumbai Indians)ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ನಿರ್ಣಾಯಕ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಇಂದಿನ ಪಂದ್ಯ ಎರಡು ತಂಡಗಳಿಗೆ ಮುಖ್ಯವಾಗಿದೆ. ಈ ಸಂದರ್ಭದಲ್ಲಿಯೇ ಮುಂಬಯಿಗೆ ಆಘಾತ ಎದುರಾಗಿದ್ದು, ಸ್ಟಾರ್ ಆಟಗಾರ ಗಾಯದ ಸಮಸ್ಯೆಯಿಂದ ಹೊರ ಹೋಗಿದ್ದಾರೆ.
ಇಂಡಿಯನ್ಸ್ ತಂಡದ ವೇಗಿ ಜೋಫ್ರಾ ಆರ್ಚರ್ (Jofra Archer) ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಈ ಕುರಿತು ಮುಂಬಯಿ ತಂಡವು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
10 ಪಂದ್ಯಗಳನ್ನಾಡಿರುವ ಆರ್ಚರ್ ಉತ್ತಮ ಬೌಲರ್ ಎನಿಸಿಕೊಂಡಿದ್ದರು. ಇದೀಗ ಆರ್‌ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನವೇ ಜೋಫ್ರಾ ಔಟ್ ಆಗಿದ್ದಾರೆ. ಆರ್ಚರ್ ಬದಲಿಗೆ ಇಂಗ್ಲೆಂಡ್‌ನ ಅನುಭವಿ ಆಟಗಾರ ಕ್ರಿಸ್ ಜೋರ್ಡಾನ್ (Chris Jordan) ಅವರನ್ನ ಮುಂಬೈ ಆಹ್ವಾನಿಸಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಜೋಫ್ರಾ ಆರ್ಚರ್ ಅವರ ಆರೋಗ್ಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ ಎಂದು ಮುಂಬಯಿ ಇಂಡಿಯನ್ಸ್ ತಿಳಿಸಿದೆ.