Kolkatta : ಆ್ಯಂಡ್ರೆ ರಸೆಲ್ (Andre Russell) ಹಾಗೂ ರಿಂಕು ಸಿಂಗ್ (Rinku Singh ) ಸ್ಫೋಟಕ ಆಟದಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಪಂಜಾಬ್ ಕಿಂಗ್ಸ್ (Punjab Kings ) ವಿರುದ್ಧ 5 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. 180 ರನ್ಗಳ ಗುರಿ ಪಡೆದ ಕೋಲ್ಕತ್ತಾ ಪರ ರಿಂಕು ಸಿಂಗ್ 20ನೇ ಓವರ್ನ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.
ಕೊನೆಯ 24 ಎಸೆತಗಳಲ್ಲಿ ಕೋಲ್ಕತ್ತಾ ತಂಡಕ್ಕೆ ಬರೋಬ್ಬರಿ 54 ರನ್ ಗಳ ಅವಶ್ಯಕತೆ ಇತ್ತು. 17ನೇ ಓವರ್ನಲ್ಲಿ 15 ರನ್ ಬಂದರೆ 18ನೇ ಓವರ್ನಲ್ಲಿ 10 ರನ್ ಬಂದಿತ್ತು. ಕೊನೆಯ 12 ಎಸೆತಗಳಲ್ಲಿ 26 ರನ್ ಬೇಕಿತ್ತು. ಸ್ಯಾಮ್ ಕರ್ರನ್ ಎಸೆದ 19ನೇ ಓವರ್ನಲ್ಲಿ ರಸೆಲ್ 3 ಸಿಕ್ಸ್ ಸಿಡಿಸಿದರು. ಹೀಗಾಗಿ ಕೊನೆಯ ಓವರ್ ನಲ್ಲಿ ಕೇವಲ 6 ರನ್ ಗಳ ಅವಶ್ಯಕತೆ ಇತ್ತು. ಅರ್ಶದೀಪ್ ಎಸೆದ ಮೊದಲ ಎಸೆತದಲ್ಲಿ ರನ್ ಬಂದಿರಲಿಲ್ಲ. ನಂತರದ ಎರಡು ಎಸೆತದಲ್ಲಿ ಸಿಂಗಲ್ ರನ್ ನಾಲ್ಕನೇ ಎಸೆತದಲ್ಲಿ 2 ರನ್ ಬಂತು. 5ನೇ ಎಸೆತ ಬ್ಯಾಟ್ ತಾಗದ ಬಾಲ್ ಕೀಪರ್ ಕೈಸೇರಿತು. ರಸೆಲ್ ನಾನ್ಸ್ಟ್ರೈಕ್ನಲ್ಲಿ ರನೌಟ್ ಆದರು. ಕೊನೆಯ ಎಸೆತವನ್ನು ರಿಂಕು ಸಿಂಗ್ ಬೌಂಡರಿಗೆ ಅಟ್ಟಿ ಕೆಕೆಆರ್ ಗೆ ಗೆಲುವು ತಂದು ಕೊಟ್ಟರು.
ರಸೆಲ್ 42 ರನ್, ರಿಂಕು ಸಿಂಗ್ ಔಟಾಗದೇ 21 ರನ್, ಜೇಸನ್ ರಾಯ್ 38 ರನ್, ನಾಯಕ ನಿತೀಶ್ ರಾಣಾ 51 ರನ್ ಸಿಡಿಸಿ ಔಟ್ ಆದರು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 53 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ, ನಾಯಕ ಶಿಖರ್ ಧವನ್ 57 ರನ್, ಬಾರಿಸಿ ತಂಡವನ್ನು ಮೇಲೆತ್ತಿದರು. ಲಿವಿಂಗ್ಸ್ಟೋನ್ 15 ರನ್, ಜಿತೇಶ್ ಶರ್ಮಾ 21 ರನ್, ರಿಶಿ ಧವನ್ 19 ರನ್ ಸಿಡಿಸಿದರು. ಪರಿಣಾಮ ಪಂಜಾಬ್ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.