Kornersite

Just In National

ಚರಂಡಿಯಲ್ಲಿ ಹರಿದು ಬಂದ ಹಣದ ರಾಶಿ; ಗಲೀಜಿನಲ್ಲಿಯೇ ಮುಗಿಬಿದ್ದ ಜನರು!

ಚರಂಡಿ ನೀರಿನಲ್ಲಿ ಕಂತೆ ಕಂತೆ ಹಣ ತೇಲಿ ಬಂದಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಜನರು ಚರಂಡಿ ನೀರು ಗಲೀಜು ಎಂಬುವುದನ್ನು ಕೂಡ ಲೆಕ್ಕಿಸದೆ ಚರಂಡಿಗೆ ಧುಮುಕಿ ಕೈಗೆ ಸಿಕ್ಕಷ್ಟು ತೆಗೆದುಕೊಂಡಿದ್ದಾರೆ.

ಹಣದ ರಾಶಿ ತೇಲಿ ಬಂದಿರುವ ಘಟನೆ ಪಾಟ್ನಾದಿಂದ 150 ಕಿ.ಮೀ ದೂರದಲ್ಲಿರುವ ಸಸಾರಾಮ್ ಜಿಲ್ಲೆಯ ಮೊರಾದಾಬಾದ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಬೆಳಿಗ್ಗೆ ವ್ಯಕ್ತಿಯೊಬ್ಬರು ಚರಂಡಿಯಲ್ಲಿ ಹಣ ತೇಲಿ ಹೋಗುವುದನ್ನು ನೋಡಿದ್ದಾರೆ. ಅದರಲ್ಲಿ 100ರ ಕಂತೆ ಕಂತೆ ನೋಟುಗಳಿದ್ದವು. ಕೆಲವು ಸಮಯದ ಬಳಿಕ ಅಲ್ಲಿ ನೋಡಿದಾಗ ನೋಟು ಕಂಡಿಲ್ಲ.

ಮೊದಲು ಉಬ್ಬರು ಚರಂಡಿಗೆ ಇಳಿದು ನೋಟಿನ ಬಂಡಲ್ ತೆಗೆದಿದ್ದರು, ಈ ವಿಚಾರ ಒಬ್ಬರಿಂದ ಒಬ್ಬರಿಗೆ ಗೊತ್ತಾಗಿ, ಇಡೀ ಗ್ರಾಮಕ್ಕೆ ವಿಷಯ ತಿಳಿದಿದೆ. ಗ್ರಾಮದ ಜನರೆಲ್ಲಾ ಗಲೀಜು ನೀಡಿಗೆ ದುಮುಕಿದ್ದರು. ನೋಟುಗಳ ಬಂಡಲ್ ಚರಂಡಿಯಿಂದ ಮೇಲಕ್ಕೆ ಬರುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಲವು ನೋಟುಗಳು ನಕಲಿ ಎಂದು ಹೇಳಿದರೆ, ಕೆಲವರು ಅಸಲಿ ಎಂದಿದ್ದಾರೆ. ಜನರು ಚರಂಡಿಗೆ ನುಗ್ಗಿ 2,000, 500, 100 ಮತ್ತು 10 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಸಂಗ್ರಹಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ