Bangalore : ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಸರ್ಕಾರವು ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಸದ್ಯ ನಗರದಲ್ಲಿನ ನಿಸರ್ಗ ಗ್ರ್ಯಾಂಡ್ ಹೊಟೇಲ್ ನಲ್ಲಿ ಮತ ಹಾಕಿದವರಿಗೆ ಉಚಿತ ಆಹಾರ ನೀಡುತ್ತಿದೆ.

ಮತ ಹಾಕಿದ ಗುರುತನ್ನು ತೋರಿಸಿದರೆ ಸಾಕು ಉಚಿತವಾಗಿ ಬಿಸಿ ಬಿಸಿ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ಜ್ಯೂಸ್ ನ್ನು ನೀಡುತ್ತಿದೆ. ಶಾಯಿಯನ್ನು ತೋರಿಸುವವರಿಗೆ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ಜ್ಯೂಸ್ ಅನ್ನು ಉಚಿತವಾಗಿ ನೀಡುತ್ತಿದೆ. ಮತದಾನದ ಶೇಕಡಾ ಪ್ರಮಾಣ ಹೆಚ್ಚಿಸುವುದಕ್ಕಾಗಿ ಹಾಗೂ ದೇಶದ ಪ್ರಜಾಪ್ರಭುತ್ವದಲ್ಲಿ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯ ಹಮ್ಮಿಕೊಂಡಿದೆ ಎನ್ನಲಾಗುತ್ತಿದೆ.
ಹೀಗಾಗಿ ಮತದಾನ ಮಾಡಿ ಇದುವರೆಗೂ ಸುಮಾರು 3 ಸಾವಿರ ಜನರು ತಿಂಡಿ ಸೇವಿಸಿದ್ದಾರೆ ಎಂದು ನಿಸರ್ಗ ಗ್ರ್ಯಾಂಡ್ ಹೋಟೆಲ್ನ ಮಾಲೀಕ ಕೃಷ್ಣ ರಾಜ್ ಹೇಳಿದ್ದಾರೆ. ಮತದಾನ ಮಾಡಿ ಬಂದವರಿಗೆ ಉಚಿತವಾಗಿ ಉಪಾಹಾರ ನೀಡಲು ಮುಂದಾಗಿದ್ದ ಬೆಂಗಳೂರಿನ ಎರಡು ಹೋಟೆಲ್ಗಳ ನಿರ್ಧಾರಕ್ಕೆ ಬಿಬಿಎಂಪಿ ನಿರ್ಬಂಧ ವಿಧಿಸಿದ್ದಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಬಿಬಿಎಂಪಿ ಕ್ರಮದ ವಿರುದ್ಧ ಹೋಟೆಲ್ ಮಾಲೀಕರ ಸಂಘಟನೆ ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ಈ ನಿರ್ಧಾರವನ್ನು ಪುರಸ್ಕರಿಸಿದೆ. ಹೀಗಾಗಿ ಜನರು ಮತ ಹಾಕಿ, ಉಚಿತ ತಿಂಡಿ ಸವಿಯುತ್ತಿದ್ದಾರೆ.