Kornersite

Bengaluru Just In Karnataka Politics State

IPL 2023: ಫ್ಲೇ ಆಪ್ ಹಾದಿ ಸುಗಮ ಮಾಡಿಕೊಂಡ ಮುಂಬಯಿ, 7ನೇ ಸ್ಥಾನಕ್ಕೆ ಜಾರಿದ ಬೆಂಗಳೂರು!

Mumbai : ಗೆಲ್ಲಲೇಬೇಕಾದ ಹಾಗೂ ಫ್ಲೇ ಆಫ್ ಹಾದಿ ಸುಗಮಗೊಳಿಸುವ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ತಂಡವು ಗೆದ್ದು ಬೀಗಿದೆ.
ಸೂರ್ಯಕುಮಾರ್‌ ಸ್ಫೋಟಕ ಅರ್ಧಶತಕದ ಆಟದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ವಿರುದ್ಧ ಮುಂಬಯಿ (Mumbai Indians) 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದು, ಫ್ಲೇ ಆಪ್ ಹಾದಿ ಸುಗಮ ಮಾಡಿಕೊಂಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು 200 ರನ್‌ ಗಳ ಕಠಿಣ ಗುರಿ ನೀಡಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಮುಂಬಯಿ ಇಂಡಿಯನ್ಸ್ ತಂಡವು ಕೇವಲ 16.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 200 ಗಡಿ ತಲುಪಿ ಜಯ ಗಳಿಸಿತು.
ಆರಂಭಿಕರಾಗಿ ಕಣಕ್ಕೆ ಇಳಿದ ನಾಯಕ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಮೊದಲ ವಿಕೆಟಿಗೆ 4.4 ಓವರ್ ಗಳಿಗೆ 51 ರನ್‌ ಕಾಣಿಕೆಯಾಗಿ ನಡೀದಿರು. ಇದರಲ್ಲಿ ಇಶನ್‌ ಕಿಶನ್‌ ಪಾಲು 42 ರನ್‌(21 ಎಸೆತ, 4 ಬೌಂಡರಿ, 4 ಸಿಕ್ಸರ್)‌. ರೋಹಿತ್‌ ಶರ್ಮಾ 7 ರನ್‌ ಗಳಿಸಿ ಔಟಾದರು.


ಮೂರನೇ ವಿಕೆಟಿಗೆ ಸೂರ್ಯಕುಮಾರ್‌ ಯಾದವ್‌ (Suryakumar Yadav) ಮತ್ತು ನೆಹಾಲ್ ವಧೇರಾ 66 ಎಸೆತಗಳಿಗೆ 140 ರನ್‌ ಗಳಿಸಿದರು. ಪರಿಣಾಮ ಮುಂಬಯಿ ತಂಡದಲ್ಲಿ ಗೆಲುವಿನ ಭರವಸೆ ಮೂಡಿತು. ಯಾದವ್‌ ತಮ್ಮ ಹಳೆಯ ಲಯಕ್ಕೆ ಮರಳಿದ್ದು 6 ಸಿಕ್ಸ್‌ ಸಿಡಿಸಿದರು. ಅಂತಿಮವಾಗಿ ಸೂರ್ಯ 83 ರನ್‌ (35 ಎಸೆತ, 7 ಬೌಂಡರಿ) ಸಿಡಿಸಿ ಔಟಾದರು. ನೆಹಾಲ್ ವಧೇರಾ ಔಟಾಗದೆ 52 ರನ್‌ (34 ಎಸೆತ, 4 ಬೌಂಡರಿ, 3 ಸಿಕ್ಸರ್‌) ಸಿಡಿಸಿದರು. ಹರ್ಷಲ್‌ ಪಟೇಲ್‌ 41 ರನ್‌, ವನಿಂದು ಹಸರಂಗ 2 ವಿಕೆಟ್‌ ಪಡೆದರು.


ಮುಂಬಯಿ ತಂಡವು 11 ಪಂದ್ಯಗಳಿಂದ 12 ಅಂಕ ಗಳಿಸಿದರೆ, ಬೆಂಗಳೂರು 11 ಪಂದ್ಯಗಳಿಂದ 10 ಅಂಕಗಳಿಸಿ 7ನೇ ಸ್ಥಾನಕ್ಕೆ ಜಾರಿತು. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರಿಗೆ ಆರಂಭದಲ್ಲಿ ಆಘಾತ ಎದುರಾಗಿತ್ತು. ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ಔಟ್ ಆಗಿದ್ದರು. 16 ರನ್‌ ಆಗುವಷ್ಟರಲ್ಲಿ ಅನುಜ್‌ ರಾವತ್‌ ಔಟಾಗಿದ್ದರು. ಮೂರನೇ ವಿಕೆಟ್ ಗೆ ಫಾಫ್‌ ಡುಪ್ಲೆಸಿಸ್‌ ಮತ್ತು ಗ್ಲೇನ್‌ ಮ್ಯಾಕ್ಸಿವೆಲ್‌ 62 ಎಸೆತಗಳಲ್ಲಿ 120 ರನ್‌ ಜೊತೆಯಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಡುಪ್ಲೆಸಿಸ್‌ 65 ರನ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ 68 ರನ್‌ ಸಿಡಿಸಿದ್ದರು.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು