Yadagiri : ರಾಜ್ಯದಲ್ಲಿ ವಿಧಾನಸಭಾ ಕಾವು ರೇಂಗೇರಿದ್ದು, ಪ್ರತಿಯೊಬ್ಬ ಮತದಾರರು ಮತಗಟ್ಟೆಗೆ ತೆರಳಿ ಮತ ಹಾಕುತ್ತಿದ್ದಾರೆ. ಎಲ್ಲೆಡೆಯೂ ಶಾಂತಿಯಿಂದ ಮತದಾನ ನಡೆಯುತ್ತಿದೆ. ಈ ವಯೋವೃದ್ಧರಿಗೆ ಯಾವುದೇ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ವೃದ್ಧೆಯೊಬ್ಬರು ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದಾರೆ.
ಸುರಪುರ (Surapur) ತಾಲೂಕಿನ ನಗನೂರಿನಲ್ಲಿ 105 ವರ್ಷದ ಅಜ್ಜಿಯೊಬ್ಬರು ತಮ್ಮ ಹಕ್ಕು ಚಲಾಯಿಸಿದ್ದಾರೆ. ದೇವಕ್ಕಮ್ಮ ಸಿದ್ದರಾಮರಡ್ಡಿ (105) ಎಂಬ ಅಜ್ಜಿ, ಮೊಮ್ಮಗನೊಂದಿಗೆ ಕಾರಿನಲ್ಲಿ ತೆರಳಿ ತಮ್ಮ ಹಕ್ಕು (Vote) ಮಾಡಿದ್ದಾರೆ. ಈ ಮೂಲಕ ಮತದಾನಕ್ಕೆ ನಿರುತ್ಸಾಹ ತೋರುವ ಯುವ ಜನರಿಗೆ ಮಾದರಿಯಾಗಿ, ಮತದಾನ ಮಾಡುವಂತೆ ಪ್ರೇರೇಪಿಸಿದ್ದಾರೆ.