Haveri : ರಾಜ್ಯದಲ್ಲಿ ಒಂದೇ ಹಂತದಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿದ್ದು, ರಾಜ್ಯದಲ್ಲಿ ಯಾವುದೇ ಅಹಿಕರ ಘಟನೆ ನಡೆಯದೆ, ಶಾಂತ ರೀತಿಯಲ್ಲಿ ಮತದಾನ ನಡೆದಿದೆ. ಹೀಗಾಗಿ ಎಕ್ಸಿಟ್ ಪೋಲ್ (Exit Poll) ಬಿಡುಗಡೆಯಾಗಿದ್ದು, ಬಹುತೇಕ ಎಕ್ಸಿಟ್ ಪೋಲ್ ಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿವೆ. ಹೀಗಾಗಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಎಕ್ಸಿಟ್ ಪೋಲ್ ಗಳು ಸತ್ಯದಿಂದ ಕುಡಿರುವುದಿಲ್ಲ. ರಿಯಲ್ ಫಲಿತಾಂಶ ಬೇರೆಯೇ ಇರುತ್ತದೆ. ಆದರೆ, ರಾಜ್ಯದಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.
ಶಿಗ್ಗಾಂವಿಯಲ್ಲಿ (Shiggavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಿಂಗ್ ಮೇಕರ್ ಅಲ್ಲ, ಕಿಂಗ್ ಕೂಡ ಅಲ್ಲ. ಅದು ತುಂಬಾ ಹಿಂದುಳಿಯಲಿದೆ. ಈ ಬಾರಿ ನಾವೇ ಕಿಂಗ್, ನಾವೇ ಕಿಂಗ್ ಮೇಕರ್. ನಮ್ಮ ಸರ್ಕಾರವೇ ಬಹುಮತ ಬರಲಿದೆ. ರಾಜ್ಯದ ಜನರು ನಮ್ಮ ಪರವಾಗಿ ಇದ್ದಾರೆ. ನಮ್ಮ ಗೆಲುವು ನಿಶ್ಚಿತ. ರಾಜ್ಯದಲ್ಲಿ ಕೂಡ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಹೇಳಿದ್ದಾರೆ.