Kornersite

Bengaluru Entertainment Gossip Just In Karnataka Mix Masala Politics Sandalwood State

Karnataka Assembly Election: ತಮ್ಮ ಹಕ್ಕು ಚಲಾಯಿಸಿದ ಸೆಲೆಬ್ರಿಟಿಗಳು; ಮತದಾನ ಮಾಡುವಂತೆ ಸಂದೇಶ!

ಚುನಾವಣೆಯ ಮತದಾನ (Voting) ಪ್ರಕ್ರಿಯೆ ಶುರುವಾಗಿದ್ದು, ಚಂದನವನದ (Sandalwood) ನ ಬಹುತೇಕ ನಟ (Actor) -ನಟಿಯರು (Actress)ಹಾಗೂ ತಂತ್ರಜ್ಞರು ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ ಅಭಿಮಾನಿಗಳಿಗೆ ಸಂದೇಶವನ್ನೂ ಸಾರಿದ್ದಾರೆ.

ಅಮೂಲ್ಯ ಆರ್ ಆರ್ ನಗರದಲ್ಲಿ ಮತದಾನ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಆರ್ ಆರ್ ನಗರ, ರಚಿತಾ ರಾಮ್ ಆರ್ ಆರ್ ನಗರ, ಮೇಘನಾ ಸರ್ಜಾ ಜೆಪಿ ನಗರ, ತಾರಾ ಜೆ ಪಿ ನಗರ, ದ್ವಾರಕೀಶ್ ಬೊಮ್ಮನಹಳ್ಳಿ, ಸೃಜನ್ ಲೋಕೇಶ್ ಕತ್ರಿಗುಪ್ಪೆ, ಅಜಯ್ ರಾವ್ ರಾಜಾಜಿನಗರ, ಬಿ.ಸರೋಜದೇವಿ ಮಲ್ಲೇಶ್ವರಂ, ಹರ್ಷಿಕಾ ಪೂಣಚ್ಚ ಕೆ ಆರ್ ಪುರ, ಪೂಜಾ ಗಾಂಧಿ ಕತ್ರಿಗುಪ್ಪೆ, ಯೋಗರಾಜ್ ಭಟ್ ಗಿರಿ ನಗರ, ಅನಂತ್ ನಾಗ್ ಮಲ್ಲೇಶ್ವರಂ ಮತ ಕೇಂದ್ರಗಳಲ್ಲಿ ತಮ್ಮ ಮತದಾನ ಮಾಡಿದ್ದಾರೆ. ಸ್ಯಾಂಡಲ್ ವುಡ್ ಬೆಡಗಿಯರಾದ ಅಮೂಲ್ಯ, ಆಶಾ ಭಟ್, ಮಿಲನಾ ನಾಗರಾಜ್, ಅನಿತಾ ಭಟ್, ಅಮೃತಾ ಅಯ್ಯಂಗಾರ್, ಮೇಘನಾ ಗಾಂವ್ಕರ್, ಸುಕೃತಾ ವಾಗ್ಲೆ, ಹರಿಪ್ರಿಯಾ, ರಚಿತಾ ರಾಮ್, ಕಾರುಣ್ಯ ರಾಮ್ ಸೇರಿದಂತೆ ಸಾಕಷ್ಟು ನಟಿಯರು ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಮತದಾನದ ಮಹತ್ವವನ್ನು ಸಾರಿದ್ದಾರೆ.

ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರ್ ಆರ್ ನಗರದಲ್ಲಿ ಮತದಾನ ಮಾಡಿದರೆ, ಶ್ರುತಿ ಹೊಸಕೆರೆ ಹಳ್ಳಿ, ಭಾರತಿ ಜಯನಗರ, ಅನಿರುದ್ದ್ ಜಯನಗರ, ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಜೆ ಪಿ ನಗರ, ಪ್ರಶಾಂತ್ ನೀಲ್ ವಸಂತನಗರದಲ್ಲಿ ತಮ್ಮ ಮತದಾನದ ಹಕ್ಕುಗಳನ್ನು ಚಲಾಯಿಸಿದ್ದಾರೆ. ಚಂದನ್ ಶೆಟ್ಟಿ ನಾಗರಭಾವಿಯಲ್ಲಿ ಮತದಾನ ಮಾಡಿದರೆ, ಕಾರುಣ್ಯ ರಾಮ್ ಆರ್ ಆರ್ ನಗರ, ಅವಿನಾಶ್ ಆರ್ ಆರ್ ನಗರ, ಜಗ್ಗೇಶ್ ಮಲ್ಲೇಶ್ವರಂ, ಶರಣ್ ಹೊಸಕೆರೆಹಳ್ಳಿ, ದುನಿಯಾ ವಿಜಯ್ ಕತ್ತಿಗುಪ್ಪೆ, ಸಾಧು ಕೋಕಿಲ ನಾಗರಭಾವಿ, ಅರ್ಜುನ್ ಜನ್ಯ ಹೆಬ್ಬಾಳ, ಶ್ರೀಮುರುಳಿ ವಸಂತನಗರ, ವಿಜಯ್ ರಾಘವೇಂದ್ರ ಯಲಹಂಕ, ಸಪ್ತಮಿಗೌಡ ಜೆ ಪಿ ನಗರ, ರಮೇಶ್ ಅರವಿಂದ್ ಪದ್ಮನಾಭ ನಗರ, ಮಾಲಾಶ್ರೀ ಶಿವಾಜಿನಗರದಲ್ಲಿ ಮತ ಚಲಾವಣೆ ಮಾಡಿದ್ದಾರೆ.

ನಟ ಯಶ್ ಕತ್ರಿಗುಪ್ಪೆಯಲ್ಲಿ ಮತದಾನ ಮಾಡಿದರೆ, ಸುದೀಪ್ ಪುಟ್ಟೇನಹಳ್ಳಿ, ಶಿವರಾಜ್ ಕುಮಾರ್ ಬ್ಯಾಟರಾಯನ ಪುರ (ರಾಚೇನಹಳ್ಳಿ), ರವಿಚಂದ್ರನ್ ರಾಜಾಜಿನಗರ, ಉಪೇಂದ್ರ ಕತ್ರಿಗುಪ್ಪೆ, ಧ್ರುವ ಸರ್ಜಾ ತ್ಯಾಗರಾಜನಗರ(ಶಾಸ್ರ್ತಿ ನಗರ), ರಾಘವೇಂದ್ರ ರಾಜ್ ಕುಮಾರ್ ಸದಾಶಿವನಗರ, ಅಶ್ವಿನಿ ಪುನೀತ್ ರಾಜ್ ಕುಮಾರ್ ಸದಾಶಿವನಗರ, ರಾಧಿಕ ಪಂಡಿತ್ ದೇವಯ್ಯ ಪಾರ್ಕ್, ಸುಧಾರಾಣಿ ಮಲ್ಲೇಶ್ವರಂ, ರಕ್ಷಿತಾ ಪ್ರೇಮ್ ಚಂದ್ರ ಲೇಔಟ್ ಪ್ರೇಮ್ ಚಂದ್ರ ಲೇಔಟ್ ನಲ್ಲಿ ತಮ್ಮ ಮತದಾನ ಮಾಡಿದ್ದಾರೆ. ರಿಷಬ್ ಶೆಟ್ಟಿ ಕೆರಾಡಿ, ಕುಂದಾಪುರ, ರಕ್ಷಿತ್ ಶೆಟ್ಟಿ ಉಡುಪಿ, ರಾಜ್ ಬಿ ಶೆಟ್ಟಿ ಉಡುಪಿ, ನಿಖಿಲ್ ಕುಮಾರಸ್ವಾಮಿ ಕೇತಗನಹಳ್ಳಿ (ಬಿಡದಿ), ಡಾಲಿ ಧನಂಜಯ ಅರಸೀಕೆರೆ, ಅಶಿಕಾ ರಂಗನಾಥ್ ತುಮಕೂರು, ಚಿಕ್ಕಣ್ಣ ಮೈಸೂರು, ಲೀಲಾವತಿ ಸೋಲದೇವನಹಳ್ಳಿ, ವಿನೋದ್ ರಾಜ್ ಸೋಲದೇವನ ಹಳ್ಳಿ, ದೊಡ್ಡಣ್ಣ ಬಿದರುಕಲ್ಲು ತಮ್ಮ ಹಕ್ಕು ಚಲಾಯಿಸಿದ್ದಾರೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು