Bangalore : ರಾಜ್ಯ ವಿಧಾನಸಭೆ (Karnataka Assembly Election) ಗೆ ಇಂದು ಮತದಾನ ನಡೆಯುತ್ತಿದೆ. ಜನರು ಹಕ್ಕ ಚಲಾಯಿಸಲು ಮತಗಟ್ಟೆಗೆ ಉತ್ಸಾಹದಿಂದ ತೆರಳುತ್ತಿದ್ದಾರೆ. ಆದರೆ, ಈ ಬಾರಿ ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕಾಣೆಯಾಗಿರುವ ಎಂಬ ಆರೋಪಗಳು ಹೆಚ್ಚಾಗಿ ಕೇಳಿ ಬಂದಿವೆ.

ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ಸಾಹದಿಂದ ಮತ ಚಲಾಯಿಸಲು ಬಂದವರಿಗೆ ನಿರಾಸೆಯಾಗಿದ್ದು,ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಯನಗರ(Jayanagar) ಕ್ಷೇತ್ರದ ವ್ಯಾಪ್ತಿಯಲ್ಲಿ ಜೆ.ಪಿ. ನಗರ 5ನೇ ಹಂತದಲ್ಲಿರುವ ಸಂವೇದ್ ಸ್ಕೂಲ್ ಮತಗಟ್ಟೆಯಲ್ಲಿ ಮತದಾರರ ಹೆಸರು ನಾಪತ್ತೆಯಾಗಿದೆ. ಹೌದು ಒಂದೇ ಮನೆಯಲ್ಲಿನ ಮೂವರು ಹೆಸರು ಪಟ್ಟಿಯಿಂದ ನಾಪತ್ತೆಯಾಗಿದೆ. ಮತ ಹಾಕಲು ಹೋಗಿ ಅವರೆಲ್ಲ ಬೇಸರ ವ್ಯಕ್ತಪಡಿಸುವಂತಾಗಿದೆ.

ಕಳೆದ ಬಾರಿಯೂ ಕೂಡ ಹೀಗೆ ಆಗಿದ್ದು, ಪಟ್ಟಿಯಿಂದ ಹೆಸರು ಡಿಲೀಟ್ ಆಗಿ ಮತದಾನದಿಂದ ವಂಚಿತರಾಗಿದ್ದರಂತೆ. ಮತ್ತೆ ಈ ಬಾರಿ ಹೀಗಾಗಿದ್ದು ಆಕ್ರೋಶ ಹೊರಹಾಕಿದ್ದಾರೆ.