Kornersite

Bengaluru Just In Karnataka Politics State

karnataka Assembly Election: ರಾಜ್ಯದಲ್ಲಿ ಇಂದು ಮತದಾನದ ಹಬ್ಬ; ಎಲ್ಲರೂ ಹಬ್ಬದಲ್ಲಿ ಭಾಗವಹಿಸಿ, ಅಭಿವೃದ್ಧಿಗೆ ಕೈ ಜೋಡಿಸಿ!

Bangalore : ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election) ಇಂದು ಮತದಾನ ನಡೆಯಲಿದೆ. ಬೆಳಗ್ಗೆ ಏಳು ಗಂಟೆಗೆ ರಾಜ್ಯದ 224 ಮತ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.

ಸಂಜೆ ಆರು ಗಂಟೆಯವರೆಗೂ ನಿರಂತರವಾಗಿ ಮತದಾನ (Vote) ಮಾಡಲು ಅವಕಾಶ ನೀಡಲಾಗಿದೆ. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ನಡೆಸಿದೆ. ಹಿಂದೆಂದೂ ಕಾಣದಷ್ಟು ಭದ್ರತೆನ್ನು ಈ ಬಾರಿ ಕೈಗೊಳ್ಳಲಾಗಿದೆ.
ಎಲ್ಲ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಸುಗಮವಾಗಿ ನಡೆದಿದೆ. ಪ್ರಧಾನಿ ಮೋದಿ (PM Modi) ಸೇರಿದಂತೆ ಘಟನಾಘಟಿ ನಾಯಕರುಗಳು, ಸೆಲೆಬ್ರಿಟಿಗಳು ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ.

  • ಒಟ್ಟು ಮತ ಕ್ಷೇತ್ರ – 224
  • ಒಟ್ಟು ಅಭ್ಯರ್ಥಿಗಳು – 2631
  • ಬಿಜೆಪಿ ಅಭ್ಯರ್ಥಿಗಳು – 224
  • ಕಾಂಗ್ರೆಸ್ ಅಭ್ಯರ್ಥಿಗಳು – 223 (ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ)
  • ಜೆಡಿಎಸ್ ಅಭ್ಯರ್ಥಿಗಳು – 207
  • ಮತ ಕೇಂದ್ರ – 58,282
  • ಮತಗಟ್ಟೆಯ ಭದ್ರತಾ ಸಿಬ್ಬಂದಿ – 84,119
  • ವಿಶೇಷ ಸಿಬ್ಬಂದಿ ಸಂಖ್ಯೆ – 2,959
  • ಮತದಾರರ ಸಂಖ್ಯೆ – 5.21 ಕೋಟಿ
  • ಪುರುಷ ಮತದಾರರ ಸಂಖ್ಯೆ – 2.62 ಕೋಟಿ
  • ಮಹಿಳಾ ಮತದಾರರ ಸಂಖ್ಯೆ – 2.59 ಕೋಟಿ
  • 112 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚು
  • ಫಸ್ಟ್ ಟೈಮ್ ವೋಟರ್‌ಗಳ ಸಂಖ್ಯೆ – 9.17 ಲಕ್ಷ
  • 100 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ – 16,976
  • ಶಾಂತಿ ಭದ್ರತೆಗೆ ನಿಯೋಜನೆಯಾದ ಪೊಲಿಸರು – 2.2 ಲಕ್ಷ

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು