Bangalore : ರಾಜ್ಯಾದ್ಯಂತ ಬಿರುಸಿನ ಮತದಾನ ನಡೆದಿದ್ದು, ಆದರೆ, ಗುಪ್ತವಾಗಿ ಹಕ್ಕು ಚಲಾಯಿಸಬೇಕಾದ ಮತದಾರರು ಅದನ್ನು ಬಹಿರಂಗ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ.
ಮತದಾನವನ್ನು ಗುಪ್ತವಾಗಿ ಮಾಡಬೇಕು ಎಂಬ ನಿಯಮ ಇದ್ದರೂ ಹಲವು ಯುವಕರು ತಾವು ಮತದಾನ ಮಾಡಿದ ವೀಡಿಯೋ, ಪೊಟೋ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಮತದಾನ ಮಾಡಿದ ನಂತರ ಯುವಕನೊಬ್ಬ ಫೇಸ್ ಬುಕ್ ನಲ್ಲಿ ಫೋಟೋ ಅಪಲೋಡ್ ಮಾಡಿಕೊಂಡಿದ್ದಾನೆ. ಹಾವೇರಿಯ ಪುರದ ಓಣಿ ಯುವಕ ಹರೀಶ್ ಮಾಳಗಿ ಹುಕ್ಕೇರಿ ಮಠದ ಮಹಿಳಾ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿ ಅದನ್ನು ತನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಹಲವರು ಫೋಟೋ ಅಥವಾ ವಿಡಿಯೋ ಮಾಡಿಕೊಂಡು ಅವುಗಳನ್ನು ಒಬ್ಬರಿಂದ ಒಬ್ಬರಿಗೆ ಶೇರ್ ಮಾಡುತ್ತಿದ್ದಾರೆ. ಹಲವರಂತೂ ವಾಟ್ಸಾಪ್ ಸ್ಟೇಟಸ್ ಇಟ್ಟುಕೊಂಡಿದ್ದಾರೆ. ಸದ್ಯ ಇಂತಹ ಕೆಲವು ಘಟನೆಗಳು ಚುನವಾಣಾ ಆಯೋಗದ ಗಮನಕ್ಕೆ ಬಂದಿವೆ ಎನ್ನಲಾಗುತ್ತಿದೆ. ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.