ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ 2 ದಿನಗಳ ಕಾಲ ಮದ್ಯದಂಗಡಿ ಬಂದ್ ಮಾಡಲಾಗಿತ್ತು. ಈ ಎರಡು ದಿನದ ಎಫೆಕ್ಟ್ ಎಷ್ಟಿದೆ ಅಂದ್ರೆ ಸರ್ಕಾರಕ್ಕೆ 150 ಕೋಟಿಯಷ್ಟು ನಷ್ಟವಾಗಿದೆ.
ಚುನಾವಣೆ ಹಿನ್ನೆಲೆ ಎರಡು ದಿನ ರಾಜ್ಯಾದ್ಯಂತ ಬಾರ್ ಹಾಗೂ ವೈನ್ ಶಾಪ್ ಕ್ಲೋಸ್ ಆಗಿತ್ತು. ರಾಜ್ಯದಲ್ಲಿ ಒಟ್ಟು 12500 ಬಾರ್, ವೈನ್ ಶಾಪ್ ಹಾಗೂ ಎಂಆರ್ ಪಿಎಲ್ ಗಳಿವೆ. ಪ್ರತಿ ದಿನ ಸರ್ಕಾರಕ್ಕೆ ₹80 ರಿಂದ ₹90 ಕೋಟಿ ಆದಾಯ ಬರ್ತಿತ್ತು. ಆದರೆ ಎರಡು ದಿನ ಬಂದ್ ಆದ ಕಾರಣ ರಾಜ್ಯ ಸರ್ಕಾರಕ್ಕೆ ಸುಮಾರು 150 ಕೋಟಿಗೂ ಅಧಿಕ ನಷ್ಟವಾಗಿದೆ.
ಕೇವಲ ಸರ್ಕಾರಕ್ಕೆ ಮಾತ್ರವಲ್ಲ ಎರಡು ದಿನ ಎಣ್ಣೆ ಅಂಗಡಿ ಬಂದ್ ಆಗಿ ಬಾರ್ ಮಾಲೀಕರಿಗೂ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ. ಒಂದು ಬಾರ್ ಗೆ ದಿನಕ್ಕೆ ₹1.5 ಲಕ್ಷ ರೂಪಾಯಿಗೂ ಅಧಿಕ ಬಿಸಿನೆಸ್ ಆಗುತ್ತೆ.
ಒಂದು ಎಂಆರ್ ಪಿಎಲ್ ಶಾಪ್ ನಲ್ಲಿ 3 ಲಕ್ಷ ರೂಪಾಯಿಗೂ ಅಧಿಕ ಮದ್ಯ ಮಾರಾಟ ಆಗುತ್ತೆ.
ಪ್ರತಿದಿನ 12,500 ಮದ್ಯದಂಗಡಿಯಿಂದ ಸರಾಸರಿ 187 ಕೋಟಿಗೂ ಅಧಿಕ ಬಿಸನೆಸ್ ಆಗುತ್ತದೆ. 2 ದಿನ ಬಂದ್ ಆಗಿ ಮದ್ಯದಂಗಡಿಗಳಿಗೆ ಸುಮಾರು ₹350 ಕೋಟಿ ಬಿಸನೆಸ ಲಾಸ್ ಆಗಿದೆ. ನಾಡಿದ್ದು ಮತ ಎಣಿಕೆ ಹಿನ್ನೆಲೆ ನಾಳೆ ರಾತ್ರಿಯಿಂದ ಮತ್ತೆ ಒಂದು ದಿನ ಮದ್ಯದಂಗಡಿ ಬಂದ್ ಆಗುತ್ತವೆ.