ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಈಗಾಗಲೇ ಮುಗಿದಿದ್ದು ಶೇಕಡಾ 72.81 ರಷ್ಟು ಮತದಾನವಾಗಿದೆ. 2600 ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಆಲ್ ರೆಡಿ ಭದ್ರವಾಗಿದೆ. ಈ ಬಾರಿ 66 ವರ್ಷಗಳ ನಂತರ ಗರಿಷ್ಟ ಮತದಾನ ಆಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಆಯೋಗ ಹಂಚಿಕೊಂಡಿರುವ ಮಾಇತಿ ಪ್ರಕಾರ ರಾಜ್ಯದಲ್ಲಿ 5,30,85,566 ಮತದಾರರ ಪೈಕಿ ಶೇ. 72.67 ರಷ್ಟು ಮತದಾನವಾಗಿದೆ. ಅಷ್ಟೇ ಅಲ್ಲ 1957ರ ನಂತರ ಶೇಕಡಾವಾರು ಮತದಾನದಲ್ಲಿ ದಾಖಲೆ ಕೂಡ ಬರೆದಿದೆ.
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಅತೀ ಹೆಚ್ಚು ಮತದಾನವಾಗಿದೆ. ಇನ್ನು ಬೆಂಗಳೂರು ಹೊರವಲಯದ ಹೊಸಕೋಟೆಯಲ್ಲಿ ಶೇ. 90ರಷ್ಟು ಮತದಾನವಾಗಿದೆ. ರಾಜ್ಯದ ಅತ್ಯಂತ ಕಡಿಮೆ ಮತದಾನ ಆಗಿರೋದು ಬೆಂಗಳೂರಿನ ಸಿ ವಿ ರಾಮನ್ ಕ್ಷೇತ್ರದಲ್ಲಿ.
ಜಿಲ್ಲೆಯಲ್ಲಿ ನೋಡುವುದಾದರೆ ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಮತದಾನವಾಗಿದ್ರೆ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾನವಾಗಿದೆ. ಚುನಾವಣಾ ಆಯೋಗವು ಈ ದಾಖಲೆ ತಾತ್ಕಾಲಿಕ ಅಂತ ಹೇಳಿದೆ. ಮತದಾನದ ಪ್ರಮಾಣ ಇನ್ನು ಹೆಚ್ಚಾಗಲಿದೆ. ಏಕೆಂದರೆ ಘೋಷಿಸಿರುವ ಮತದಾನ ಪ್ರಮಾಣದಲ್ಲಿ ಪೋಸ್ಟಲ್ ಬ್ಯಾಲೆಟ್ ಮತದಾನದ ಅಂಕಿ ಅಂಶಗಳು ಒಳಗೊಂಡಿಲ್ಲ.