Kornersite

Just In Sports

IPL 2023: ಭರ್ಜರಿ ಜಯ ದಾಖಲಿಸಿದ ರಾಜಸ್ಥಾನ್; ಫ್ಲೇ ಆಫ್ ಹಾದಿ ಇನ್ನು ಸರಳ!

Kolkatta : ಯಶಸ್ವಿ ಜೈಸ್ವಾಲ್‌ ದಾಖಲೆಯ ವೇಗದ ಅರ್ಧಶತಕ ಹಾಗೂ ಸಂಜು ಸ್ಯಾಮ್ಸನ್‌ ಸ್ಫೋಟಕ ಆಟದಿಂದಾಗಿ ರಾಜಯಸ್ಥಾನ ರಾಯಲ್ಸ್‌ (Rajasthan Royals ) ತಂಡವು ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders ) ವಿರುದ್ಧ 9 ವಿಕೆಟ್‌ ಗಳ ಭರ್ಜರಿ ಜಯ ದಾಖಲಿಸಿದೆ.

ಗೆಲ್ಲಲು 150 ರನ್‌ ಗಳ ಗುರಿ ಪಡೆದಿದ್ದ ರಾಜಸ್ಥಾನ 13.1 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 151 ರನ್‌ ಗಳಿಸಿವು ಮೂಲಕ ಗೆಲುವಿನ ನಗೆ ಬೀರಿತು. 21 ವರ್ಷದ ಯುವ ಆಟಗಾರ ಜೈಸ್ವಾಲ್‌ (Yashasvi Jaiswal ) ಕೇವಲ 13 ಎಸೆತಗಳಲ್ಲಿ 50 ರನ್‌ (6 ಬೌಂಡರಿ, 3 ಸಿಕ್ಸ್‌) ಚಚ್ಚುವ ಮೂಲಕ ಕೆಎಲ್‌ ರಾಹುಲ್‌ (KL Rahul) ಅವರ ಹೆಸರಿನಲ್ಲಿದ್ದ ವೇಗದ ಅರ್ಧಶತಕ ದಾಖಲೆ ಮುರಿದರು. ಈ ಮೊದಲು 2018ರ ಆವೃತ್ತಿಯಲ್ಲಿ ರಾಹುಲ್‌14 ಎಸೆತಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಅರ್ಧಶತಕ ಸಿಡಿಸಿದ್ದರು. ಮೊದಲ ವಿಕೆಟ್ ಗೆ 30 ರನ್‌ ಬಂದರೂ ಬಟ್ಲರ್‌ ಕೊಡುಗೆ ಶೂನ್ಯಕ್ಕೆ ಔಟ್ ಆಗಿದ್ದರು. ಜೈಸ್ವಾಲ್‌ ಮತ್ತು ಸಂಜು ಸ್ಯಾಮ್ಸನ್‌ (Sanju Samson) 69 ಎಸೆತಗಳಲ್ಲಿ 121 ರನ್‌ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದು ಕೊಟ್ಟರು.

ಜೈಸ್ವಾಲ್‌ ಔಟಾಗದೆ 98 ರನ್‌, ಸಂಜು ಸ್ಯಾಮ್ಸನ್‌ ಔಟಾಗದೆ 48 ರನ್‌, 16 ಎಸೆತಗಳಲ್ಲಿ ರಾಜಸ್ಥಾನದ ಮೊದಲ 50 ರನ್‌ ಬಂದಿದ್ದರೆ 49 ಎಸೆತಗಳಲ್ಲಿ 100 ರನ್‌ ಗಡಿ ದಾಟಿತ್ತು. ಪಂದ್ಯವನ್ನು ಗೆಲ್ಲುವ ಮೂಲಕ 5ನೇ ಸ್ಥಾನದಲ್ಲಿದ್ದ ರಾಜಸ್ಥಾನ 3ನೇ ಸ್ಥಾನಕ್ಕೆ ಜಿಗಿದರೆ 6ನೇ ಸ್ಥಾನದಲ್ಲಿದ್ದ ಕೋಲ್ಕತ್ತಾ 7ನೇ ಸ್ಥಾನಕ್ಕೆ ಜಾರಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತ ಸಾಗಿತು. ವೆಂಕಟೇಶ್‌ ಅಯ್ಯರ್‌ 57 ರನ್‌, ನಾಯಕ ನಿತೀಶ್‌ ರಾಣಾ 22 ರನ್‌ ಗಳಿಸಿದರು. ಚಹಲ್ 4 ವಿಕೆಟ್‌, ಬೌಲ್ಟ್‌ 2 ವಿಕೆಟ್‌, ಸಂದೀಪ್‌ ಶರ್ಮಾ ಮತ್ತು ಆಸೀಫ್‌ ತಲಾ ಒಂದೊಂದು ವಿಕೆಟ್‌ ಪಡೆದರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್