ಇಬ್ಬರು ಮಕ್ಕಳನ್ನು ಕೊಂದು ಪತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ. ಮೃತರನ್ನ ಬಿಟಿಎಂ ಬಡಾವಣೆಯ ನಿವಾಸಿ 35 ವರ್ಷದ ಹರೀಶ್, ಮಕ್ಕಳು ಆರು ವರ್ಷದ ಪ್ರಜ್ವಲ್ ಹಾಗೂ ನಾಲ್ಕು ವರ್ಷದ ರಿಷಬ್ ಎಂದು ಗುರುತಿಸಲಾಗಿದೆ. ಮೇ 10 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೊದಲು ಮಕ್ಕಳನ್ನ ನೇಣು ಹಾಕಿ ಕೊಂದು ನಂತರ ಅದೇ ಹಗ್ಗಕ್ಕೆ ತಾನೂ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಸಾಯೋದಕ್ಕು ಮುನ್ನ ಮೃತ ಹರೀಶ್ ತನ್ನ ಸ್ನೇಹಿತರೊಬ್ಬರಿಗೆ ವಾಟ್ಸ್ ಪ್ ಕಾಲ್ ಮಾಡಿ ಮಾತನಾಡಿದ್ದಾನೆ. ತಾನು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಿತ್ತಿದ್ದೇನೆ. ತನಗೆ ಬರಬೇಕಾದ ಹಣ ಮತ್ತು ಎಲ್ ಐಸಿ ಬಾಂಡ್ ಹಣವನ್ನು ಪತ್ನಿಗೆ ನೀಡುವಂತೆ ತಿಳಿಸಿದ್ದಾನೆ. ಕೂಡಲೇ ಮೃತ ಹರೀಶನ ಸ್ನೇಹಿತ ಲೋಕೇಶನ್ ಗಾಗಿ ಹುಡುಕಾಟ ನಡೆಸಿದ್ದಾನೆ. ಈ ವೇಳೆ ಜಿಗಣಿ ಪೊಲೀಸ್ ಟಾಣಾ ವ್ಯಾಪ್ತಿಯಲ್ಲಿ ಇರೋದು ಪತ್ತೆಯಾಗಿದೆ.
2007 ರಲ್ಲಿ ಅಕ್ಕನ ಮಗಳನ್ನ ಪ್ರೀತಿಸಿ ಮದುವೆಯಾಗಿದ್ದ ಹರೀಶ್. ಮದುವೆಯಾದ ಕೆಲ ಸಮಯದ ನಂತರ ಇಬ್ಬರ ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು. ಪತ್ನಿಯ ಹೈಫೈ ಲೈಫ್ ನಿಂದ ಹರೀಶ್ ಬೇಸತ್ತು ಹೋಗಿದ್ದ. ಅಷ್ಟೇ ಅಲ್ಲ ಪತ್ನಿ ಪ್ರತ್ಯೇಕ ಮನೆ ಮಾಡುವಂತೆ ಒತ್ತಾಯ ಕೂಡ ಮಾಡ್ತಾ ಇದ್ದಳು. ಪತ್ನಿಯ ಆಸೆತ ಮೇರೆಗೆ ಪ್ರತ್ಯೇಕ ಬಾಡಿಗೆ ಮನೆ ಕೂಡ ಮಾಡಿದ್ದ ಹರೀಶ್. ಆದ್ರೆ ಪತ್ನಿ ಮಾತ್ರ ಪರ ಪುರುಷನೊಂದಿಗೆ ಪರಾರಿಯಾಗಿದ್ದಳು ಎನ್ನುವ ಆರೋಪ ಕೇಳಿ ಬಂದಿದೆ.
ಪತ್ನಿ ಬಿಟ್ಟು ಹೋದ ನಂತರ ಇಬ್ಬರು ಮಕ್ಕಳನ್ನ ಹರೀಶ್ ನೋಡಿಕೊಳ್ಳುತ್ತಿದ್ದ. ಆದರೆ ಕೆಲ ಸಮಯದ ನಂತರ ಪತ್ನಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳಂತೆ. ಹಣ ಕೊಡದೇ ಹೋದಲ್ಲಿ ಮನೆ ಬಳಿ ಬಂದು ಗಲಾಟೆ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದಳಂತೆ.
ಇದರಿಂದ ಮನನೊಂದ ಹರೀಶ್, ಮಕ್ಕಳಿಗೆ ನೇಣು ಹಾಕಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಜಿಗಣಿ ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.