Hubballi : ಇಂದು ರಾಜ್ಯ ವಿಧಾನಸಭೆ ಚುನಾವಣೆಯ ಹಣೆಬರಹ ಹೊರಗೆ ಬರುತ್ತಿದ್ದು, ಬಿಜೆಪಿ ಮತ್ತೊಮ್ಮೆ ಅಧಿಕಾರದ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್ ಅಧಿಕಾರದ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಹುಬ್ಬಳ್ಳಿಯಿಂದ (Hubballi) ಶಿಗ್ಗಾವಿಗೆ (Shiggavi) ತೆರಳುವ ಸಂದರ್ಭದಲ್ಲಿ ಆದರ್ಶ ನಗರದಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೆಡಿಎಸ್ (JDS) ಸೇರಿದಂತೆ ಯಾರೂ ಸಂಪರ್ಕದಲ್ಲಿ ಇಲ್ಲ. ಕರ್ನಾಟಕ ವಿಧಾನ ಸಭೆಯ ಫಲಿತಾಂಶದ ದಿನ ಈ ಫಲಿತಾಂಶ ಬಹಳಷ್ಟು ಮುಖ್ಯ. ರಾಜ್ಯ, ಅಭಿವೃದ್ಧಿ, ಜನರ, ರಾಜಕೀಯ ದೃಷ್ಟಿಯಿಂದ ಬಹಳಷ್ಟು ಮುಖ್ಯ. ಮುಂದಿನ ಐದು ವರ್ಷದ ರಾಜ್ಯ ಅಭಿವೃದ್ಧಿ ಮತ್ತು ಸುರಕ್ಷಿತವಾಗಿ ನಾಡು ಮಾಡುವ ನಿಟ್ಟಿನಲ್ಲಿ ಜನ ಮತ ನೀಡಿದ್ದಾರೆಂಬ ನಂಬಿಕೆಯಿದೆ. ನಮ್ಮ ಬಿಜೆಪಿ ಸ್ಪಷ್ಟ ಬಹುಮತದಿಂದ ಜಯ ಸಾಧಿಸಲಿದೆ ಎಂದು ಹೇಳಿದ್ದಾರೆ.
ಜನ ಶಾಂತಿಯುತ ಮತದಾನ ಮಾಡಿದ್ದಾರೆ. ಶಾಂತಿಯುತ ಮತದಾನ ಮಾಡಿದ್ದಕ್ಕೆ ಕೃತಜ್ಞತೆ. ಅದೇ ರೀತಿ ಮತ ಎಣಿಕೆಯಲ್ಲಿ ಸಹ ಎಲ್ಲರೂ ಶಾಂತಿಯುತವಾಗಿ ವರ್ತನೆ ಮಾಡಬೇಕು ಎಂದು ಸೂಚಿಸಿದ್ದಾರೆ.