ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಿದ್ದಂತೆ, ಸಿಎಂ ಅಭ್ಯರ್ಥಿಗಳಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಹೆಸರುಗಳು ಗೂಗಲ್ ಸರ್ಚ್ ನಲ್ಲಿ ಟ್ರೆಂಡ್ ಆಗ್ತಾ ಇದೆ. ಜನರು ಸಿಕ್ಕಾಪಟ್ಟೆ ಇವರಿಬ್ಬರ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡುತ್ತಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಆಗ್ತಾ ಇದ್ದಂತೆ ಚುನಾವಣೆಯ ಬಗ್ಗೆ, ಪಾರ್ಟಿ ಬಗ್ಗೆ, ಅಭ್ಯರ್ಥಿಗಳ ಬಗ್ಗೆ ಗೂಗಲ್ ಸರ್ಚ್ ಹೆಚ್ಚಾಗಿದೆ. ಯಾರಿಗೆ ಬಹುಮತ ಸಿಗಲಿದೆ, ಎಕ್ಸಿಟ್ ಪೋಲ್ ಏನ್ ಹೇಳುತ್ತೆ ಎನ್ನುವುದರ ಬಗ್ಗೆ ಕುತೂಹಲದಿಂದ ಜನರು ಸರ್ಚ್ ಮಾಡುತ್ತಿದ್ದಾರೆ.
ಕೇವಲ್ ಚುನಾವನೆ ಬಗ್ಗೆ ಅಲ್ಲ ಬದಲಿಗೆ ಕ್ಯಾಂಡಿಡೇಟ್ ಅದರಲ್ಲೂ ಸ್ಪೇಷಲಿ ಸಿದ್ದರಾಮಯ್ಯ್ ಹಾಗೂ ಡಿ ಕೆ ಶಿವಕುಮಾರ್ ಬಗ್ಗೆ ಸರ್ಚ್ ಮಾಡೋದು ಕಂಡು ಬಂದಿದೆ. ಯಸ್, ಸಿಎಂ ಕ್ಯಾಂಡಿಡೇಟ್ ಗಳಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಬಗ್ಗೆ ಗೂಗಲ್ ನಲ್ಲಿ ಹೆಚ್ಚಾಗಿ ಸರ್ಚ್ ಆಗುತ್ತಿದೆ. ಇವರಿಬ್ಬರ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದಕ್ಕೆ ಜನರು ಕುತೂಹಲರಾಗಿದ್ದಾರೆ.