ವಿಧಾನಸಭೆ ಚುನಾವಣೆ (Assembly Election 2023)ಯಲ್ಲಿ ಈ ಬಾರಿ ನಟ ಶಿವರಾಜ್ ಕುಮಾರ್ ಅವರು (Shivaraj Kumar) ಪ್ರಚಾರ ನಡೆಸಿದ್ದರು. ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಪರವಾಗಿ ಶಿವಣ್ಣ ಪ್ರಚಾರ ನಡೆಸಿದ್ದರು. ಅವರು ಪ್ರಚಾರ ನಡೆಸಿದ್ದ ಬಹುತೇಕ ಕ್ಷೇತ್ರಗಳಲ್ಲಿ ಸದ್ಯ ಅಭ್ಯರ್ಥಿಗಳು ಗೆದ್ದಿದ್ದಾರೆ ಎನ್ನಲಾಗುತ್ತಿದೆ.
ಮಧು ಬಂಗಾರಪ್ಪ ಸೇರಿದಂತೆ ಒಟ್ಟು 7 ಜನ ಅಭ್ಯರ್ಥಿಗಳ ಪರವಾಗಿ ಶಿವರಾಜ್ ಕುಮಾರ್ ಪ್ರಚಾರ ಮಾಡಿದ್ದರು. ಅದರಲ್ಲಿ ಸೋಲಿಗಿಂತ ಗೆದ್ದವರ ಸಂಖ್ಯೆಯೇ ಹೆಚ್ಚಿದೆ. ಮಧು ಬಂಗಾರಪ್ಪ, ಸಿದ್ದರಾಮಯ್ಯ, ಕಿಮ್ಮನೆ ರತ್ನಾಕರ್, ಜಗದೀಶ್ ಶೆಟ್ಟರ್, ಲಕ್ಷ್ಮೀ ಹೆಬ್ಬಾಳ್ಕರ್, ಬೇಲೂರು ಗೋಪಾಲಕೃಷ್ಣ, ಭೀಮಣ್ಣ ನಾಯ್ಕ್ ಹೀಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಶಿವರಾಜ್ ಕುಮಾರ್ ರೋಡ್ ಶೋ ಮಾಡಿದರು. ಅಭ್ಯರ್ಥಿಗಳ ಪರವಾಗಿ ಮಾತನಾಡಿದರು. ಇದರಲ್ಲಿ ಇಬ್ಬರು ಮಾತ್ರ ಸೋತಿದ್ದು, ಉಳಿದವರು ಗೆದ್ದಿದ್ದಾರೆ ಎನ್ನಲಾಗುತ್ತಿದೆ.
ಮಧು ಬಂಗಾರಪ್ಪ, ಶಿರಸಿಯಲ್ಲಿ ಭೀಮಣ್ಣ ನಾಯ್ಕ್, ವರುಣಾದಲ್ಲಿ ಸಿದ್ಧರಾಮಯ್ಯ, ಬೆಳಗಾವಿ ಗ್ರಾಮಾಂತರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ಸಾಗರ ಕ್ಷೇತ್ರದಲ್ಲಿ ಬೇಲೂರು ಗೋಪಾಲಕೃಷ್ಣ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರು ಮಾತ್ರ ಸೋಲು ಕಂಡಿದ್ದಾರೆ.