Bangalore : ವಿಧಾನಸಭಾ ಚುನಾವಣೆ (Karnataka Election Result) ಯಲ್ಲಿ ಬಿಜೆಪಿಯಂತೆ ಜೆಡಿಎಸ್ ಕೂಡ ನಿರೀಕ್ಷಿತ ಜಯ ಸಾಧಿಸಲು ಹಿಂದೆ ಬಿದ್ದಿದೆ. ಸ್ಪಷ್ಟ ಬಹುಮತ ಕಾಂಗ್ರೆಸ್‌ಗೆ (Congress) ಬಂದಿದ್ದು, ಅಧಿಕಾರ ಹಿಡಿಯಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಜೆಡಿಎಸ್ ಹಾಗೂ ಬಿಜೆಪಿ ತಮ್ಮ ಸೋಲಿನ ಕುರಿತು ಈಗ ಆತ್ಮಾವಲೋಕನ ಮಾಡಿಕೊಳ್ಳುತ್ತಿವೆ.
ಇದರ ಮಧ್ಯೆ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಹೀನಾಯ ಸೋಲು ಅನುಭವಿಸಿದ್ದು, ಕೇವಲ 20 ಕ್ಷೇತ್ರಗಳನ್ನು ಗೆದ್ದಿರುವ ಜೆಡಿಎಸ್ ಎಡವಿರುವುದಕ್ಕೆ ಕೆಲವು ಕಾರಣಗಳನ್ನು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹಳೆ ಮೈಸೂರು ಪ್ರದೇಶ ಬಿಟ್ಟು ಜೆಡಿಎಸ್ ಗೆ ಕಬೇರೆ ಕ್ಷೇತ್ರದಲ್ಲಿ ಪ್ರಭಲ ಅಭ್ಯರ್ಥಿಗಳ ಕೊರತೆಯಾಗಿರುವುದು. ಹಳೆ ಮೈಸೂರು ಭಾಗದಲ್ಲಿ ಕಳೆದ ಬಾರಿ ಹೆಚ್ಚು ಸ್ಥಾನ ಕೊಟ್ಟರೂ ಕ್ಷೇತ್ರಗಳ ಅಭಿವೃದ್ಧಿ ಅಗಿಲ್ಲ ಎಂಬ ಆರೋಪ ಹೆಚ್ಚಾಗಿ ಕೇಳಿ ಬಂದಿದೆ. ಕುಮಾರಸ್ವಾಮಿ ಒಬ್ಬರೇ ಇಡೀ ರಾಜ್ಯ ಸುತ್ತಿ ಓಡಾಡಿದ್ದಾರೆ. ಆದರೆ, ಆ ಪಕ್ಷದಲ್ಲಿ ಪರ್ಯಾಯ ನಾಯಕರನ್ನು ಬೆಳೆಸುವ ಕಾರ್ಯ ಕುಮಾರಸ್ವಾಮಿ ಅವರಿಂದ ಆಗಲಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಬಿಜೆಪಿ-ಕಾಂಗ್ರೆಸ್‌ನಷ್ಟು ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಇಲ್ಲದೆ ಇರುವುದು ಕೂಡ ಪಕ್ಷ ಸೋಲಲು ಕಾರಣವಾಗಿದೆ. ದೇವೇಗೌಡರ ಅನಾರೋಗ್ಯದಿಂದ ಹೆಚ್ಚು ಪ್ರಚಾರ ಮಾಡದಿರುವುದು ಕೂಡ ಸೋಲಿಗೆ ಪ್ರಮುಖ ಕಾರಣವಾಗಿದೆ. ಕಾಂಗ್ರೆಸ್-ಬಿಜೆಪಿಯಂತೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಇಲ್ಲದೆ ಇರೋದು, ಬಿಜೆಪಿ-ಕಾಂಗ್ರೆಸ್‌ನಂತೆ ಜೆಡಿಎಸ್‌ನಲ್ಲಿ 2ನೇ ಹಂತದ ನಾಯಕರು ಇಲ್ಲದೆ ಇರುವುದು, ಸಮ್ಮಿಶ್ರ ಸರ್ಕಾರ ಬಂದರೆ ಮತ್ತೆ ಅನ್ಯ ಪಕ್ಷಗಳ ಜೊತೆ ಕೈ ಜೋಡಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ಗೆ ಹಳೆ ಮೈಸೂರು ಭಾಗದಲ್ಲಿ ಮತದಾರರು ಮಣೆ ಹಾಕಿರುವುದು ಜೆಡಿಎಸ್ ಗೆ ದೊಡ್ಡ ಪೆಟ್ಟು ನೀಡಿದೆ.